ಚೆನ್ನೈ :ತಮಿಳುನಾಡು ವಿಧಾನಸಭೆ ಮತದಾನ ಬಿರುಸಾಗಿ ಸಾಗಿದೆ. ಈ ನಡುವೆ ಮತಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತನ್ನ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಡಿಎಂಕೆ ಅಭ್ಯರ್ಥಿ ಕಾರ್ತಿಕೇಯ ಆರೋಪಿಸಿದ್ದಾರೆ.
ಎಐಎಡಿಎಂಕೆ-ಡಿಎಂಕೆ ಕಾರ್ಯಕರ್ತರ ಗಲಾಟೆ.. ಡಿಎಂಕೆ ಅಭ್ಯರ್ಥಿ ಕಾರು ಅಡ್ಡಗಟ್ಟಿ ಹಲ್ಲೆ ಆರೋಪ - ಡಿಎಂಕೆ ಅಭ್ಯರ್ಥಿ ಕಾರ್ತಿಕೇಯ
ಮತದಾನ ಕೇಂದ್ರಕ್ಕೆ ತೆರಳುವ ವೇಳೆ ಕಾರ್ತಿಕೇಯ ಸೇನಾಪತಿ ಕಾರು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದಲ್ಲದೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು..
ಎಐಎಡಿಎಂಕೆ-ಡಿಎಂಕೆ ಕಾರ್ಯಕರ್ತರ ಗಲಾಟೆ.
ಮತದಾನ ಕೇಂದ್ರಕ್ಕೆ ತೆರಳುವ ವೇಳೆ ಕಾರ್ತಿಕೇಯ ಸೇನಾಪತಿ ಕಾರು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದಲ್ಲದೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.
ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ನಂತರ ಡಿಎಂಕೆ ಅಭ್ಯರ್ಥಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಐಎಡಿಎಂಕೆ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದಾರೆ.