ಚೆನ್ನೈ/ನವದೆಹಲಿ:ಮುಂದಿನ ತಿಂಗಳು ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ಎಐಎಡಿಎಂಕೆ-ಬಿಜೆಪಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯುವ ಉತ್ಸಾಹದಲ್ಲಿದೆ. ಆದ್ರೆ ಈ ಪಕ್ಷಗಳೊಂದಿಗೆ ಸೇರಿಕೊಳ್ಳಲು ಮುಂದಾಗಿದ್ದ ಡಿಎಂಡಿಕೆ ಇದೀಗ ಮೈತ್ರಿಯಿಂದ ಹೊರಬಂದಿದೆ.
ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಮೈತ್ರಿಯಿಂದ ಹೊರಬಂದಿದೆ. ಮೂರು ಹಂತದ ಮಾತುಕತೆ ನಡೆದಿದ್ದು, ಈ ವೇಳೆ ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ನಲ್ಲಿದ್ದಿದ್ರೆ ಸಿಎಂ ಆಗ್ತಿದ್ರು ಎಂಬ ರಾಹುಲ್ ಹೇಳಿಕೆಗೆ ಸಿಂಧಿಯಾ ತಿರುಗೇಟು ಹೀಗಿದೆ..
ಎಐಎಡಿಎಂಕೆ ಪ್ರಬಲ ನಾಯಕಿ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ನಡೆದಿತ್ತು. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಸ್ಪರ್ಧೆ ಎದುರಿಸಲಿದ್ದು, ಈಗಾಗಲೇ ಸೀಟು ಹಂಚಿಕೆ ಕೂಡ ಮುಕ್ತಾಯಗೊಂಡಿದೆ.
234 ಕ್ಷೇತ್ರಗಳ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.