ಕರ್ನಾಟಕ

karnataka

ETV Bharat / bharat

ಪೆರೋಲ್​ ಅವಧಿ ಮುಕ್ತಾಯ: ಮತ್ತೆ ಜೈಲು ಸೇರಿದ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್‌

ಐಎಎಸ್​ ಅಧಿಕಾರಿ ಜಿ.ಕೃಷ್ಣಯ್ಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್‌ ಮತ್ತೆ ಜೈಲು ಸೇರಿದ್ದಾರೆ.

DM G Krishnaiah murder case: Bihar former MP Anand Mohan parole period over
ಮತ್ತೆ ಜೈಲು ಸೇರಿದ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್‌

By

Published : Apr 26, 2023, 4:19 PM IST

ಸಹರ್ಸಾ (ಬಿಹಾರ):ಐಎಎಸ್​ ಅಧಿಕಾರಿ ಜಿ.ಕೃಷ್ಣಯ್ಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್‌ ಪೆರೋಲ್​ ಅವಧಿ ಮುಕ್ತಾಯವಾಗಿದ್ದು, ಇಂದು ಸಹರ್ಸಾ ಜೈಲಿಗೆ ಅವರು ಶರಣಾಗಿದ್ದಾರೆ.

1994ರ ಡಿಸೆಂಬರ್ 5ರಂದು ಅಂದಿನ ಗೋಪಾಲಗಂಜ್‌ ಜಿಲ್ಲಾಧಿಕಾರಿಯಾಗಿದ್ದ ಕೃಷ್ಣಯ್ಯ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ ಜನರನ್ನು ಪ್ರಚೋದಿಸಿದ ಆರೋಪ ಮೇಲೆ ಆನಂದ್ ಮೋಹನ್‌ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 16 ವರ್ಷಗಳಿಂದ ಜೈಲಿನಲ್ಲಿದ್ದು, ಇದೇ ಸೋಮವಾರ ಆನಂದ್ ಮೋಹನ್ ಸೇರಿದಂತೆ 27 ಕೈದಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರದ ಈ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಲವು ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಜೊತೆಗೆ ಹತ್ಯೆಯಾದ ಕೃಷ್ಣಯ್ಯ ಕುಟುಂಬ ಕೂಡ ಕೈದಿಗಳು ಬಿಡುಗಡೆಗೆ ವಿರೋಧಿಸಿದ್ದಾರೆ.

ಇದನ್ನೂ ಓದಿ:41ನೇ ವರ್ಷದಲ್ಲಿ ಪರಾರಿ.. 70ನೇ ವಯಸ್ಸಿನಲ್ಲಿ ಬಂಧನ.. ಇವರು ಮಾಡಿದ ಅಪರಾಧವಾದರೂ ಏನು?

ಸದ್ಯ ಆನಂದ್ ಮೋಹನ್‌ 15 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದರು. ನಿನ್ನೆಗೆ ಎಂದರೆ ಏಪ್ರಿಲ್ 25ಕ್ಕೆ ಪೆರೋಲ್​ ಅವಧಿ ಮುಕ್ತಾಯವಾಗಿದ್ದು, ಇಂದು ಸಹರ್ಸಾ ಜೈಲಿಗೆ ಮರಳಿ ಶರಣಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಜೈಲಿನಿಂದ ಬಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಮತ್ತೊಂದೆಡೆ, ಮಂಗಳವಾರ ಪಾಟ್ನಾದಿಂದ ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಪುತ್ರ ಚೇತನ್ ಆನಂದ್ ನಿಶ್ಚಿತಾರ್ಥಕ್ಕಾಗಿ 15 ದಿನಗಳ ಪೆರೋಲ್ ಪಡೆದಿದ್ದೆ. ಈ ಪೆರೋಲ್ ಅವಧಿಯು ಏ.25ಕ್ಕೆ ಕೊನೆಗೊಂಡಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನಾನು ಬುಧವಾರ ಬೆಳಗ್ಗೆ ಶರಣಾಗಬೇಕಾಗುತ್ತದೆ ಎಂದು ಹೇಳಿದ್ದರು.

ಇದೇ ವೇಳೆ, ಸರ್ಕಾರದ ಬಿಡುಗಡೆ ಆದೇಶ ಬಗ್ಗೆ ಪ್ರತಿಕ್ರಿಯಿಸಿದ್ದ ಆನಂದ್ ಮೋಹನ್‌, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ. ಜೊತೆಗೆ ಈ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು ಎಂದು ತಿಳಿಸಿದ್ದರು. ಅಲ್ಲದೇ, ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಬಗ್ಗೆ ಜೈಲಿನಿಂದ ಹೊರಬಂದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ಭೇಟಿಯಾಗಿ ನಿರ್ಧರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

ಜೈಲು ನಿಯಮಗಳ ಸಡಿಲಿಕೆ ಆರೋಪ:ಆನಂದ್ ಮೋಹನ್‌ ಅವರ ಬಿಡುಗಡೆಗಾಗಿ ಬಿಹಾರ ಸರ್ಕಾರ ಜೈಲಿನ ನಿಯಮಗಳಲ್ಲಿ ಸಡಿಲಿಕೆ ಮಾಡಿದ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿದ್ದ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನನಗಾಗಿ ನಿಯಮಗಳನ್ನು ಬದಲಾಯಿಸಿದ್ದರೆ, ನಾನು ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಏಕೆ ಇರಬೇಕಾಯಿತು ಎಂದು ಪ್ರಶ್ನಿಸಿದ್ದರು.

ಸರ್ಕಾರ ಬಿಡುಗಡೆ ಮಾಡಲು ಆದೇಶಿಸಿರುವ ಪಟ್ಟಿಯಲ್ಲಿ ನನ್ನ ಹೆಸರು 11ನೇ ಸ್ಥಾನದಲ್ಲಿದೆ. ಅದಕ್ಕೆ ಸರ್ಕಾರವನ್ನು ದೂರುವುದು ತಪ್ಪು. ನ್ಯಾಯಾಲಯದ ಆದೇಶದ ಮೇರೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಾನು ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದೇನೆ. ನನ್ನ ಶಿಕ್ಷೆಯ ನಂತರ ನನ್ನನ್ನು ಬಿಡುಗಡೆ ಮಾಡಲಾಗುತ್ತಿದೆ. ಆದ್ದರಿಂದ ಇಂತಹ ಪ್ರಶ್ನೆಗಳನ್ನು ಎತ್ತಬಾರದು. ನಿಯಮಗಳ ಪ್ರಕಾರ ಜೈಲು ಪಾಲಾಗಿದ್ದೆ, ಈಗ ನಿಯಮದ ಪ್ರಕಾರ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ

ABOUT THE AUTHOR

...view details