ಕರ್ನಾಟಕ

karnataka

ETV Bharat / bharat

Diwali 2021: ನಾಡಿನಾದ್ಯಂತ ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ... ಲಕ್ಷ್ಮಿಗೆ ವಿಶೇಷ ಪೂಜೆ, ಅಲಂಕಾರ

ನವೆಂಬರ್ 4 ರಂದು ಗುರುವಾರದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು. ದೀಪಾವಳಿ ಹಬ್ಬಕ್ಕಾಗಿ ಈಗಾಗಲೇ ಮನೆ ಮನೆಯಲ್ಲಿ ಸಿದ್ಧತೆಯು ಆರಂಭವಾಗಿದೆ. ಈ ಬೆಳಕಿನ ಹಬ್ಬವನ್ನು ಸಂತೋಷದ ಹಬ್ಬ ಎಂದೂ ಕರೆಯುತ್ತಾರೆ.

Diwali 2021 celebration, Diwali 2021 celebration on navember 4th, Diwali 2021, Diwali 2021 news, ದೀಪಾವಳಿ ಆಚರಣೆ, ದೀಪಾವಳಿ ಆಚರಭೆ 2021, ನವೆಂಬರ್ 4ರಂದು ದೀಪಾವಳಿ ಆಚರಣೆ,
ನಾಡಿನಾದ್ಯಂತ ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

By

Published : Nov 3, 2021, 5:33 AM IST

ದೀಪಾವಳಿಯಂದು ಲಕ್ಷ್ಮಿಗೆ ವಿಶೇಷ ಪೂಜೆ ಮಾಡಲಾಗುವುದು. ಲಕ್ಷ್ಮಿಯನ್ನು ಸಂತೋಷ ಮತ್ತು ಸಮೃದ್ಧಿಯ ದೇವತೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಲಕ್ಷ್ಮಿಯ ಕೃಪೆ ದೊರೆತಾಗ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ ಬರುತ್ತದೆ. ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ.

ದೀಪಾವಳಿ ಹಬ್ಬವು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದೆ. ಆ ದಿನ ಲಕ್ಷ್ಮಿಗೆ ಆರತಿ ಬೆಳಗಿ ಪೂಜೆ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತಾಳೆ ಎಂದು ನಂಬಲಾಗಿದೆ. ದೀಪಾವಳಿ ಹಬ್ಬವನ್ನು ಲಕ್ಷ್ಮಿಯ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿನ ಮಂಗಳಕರ ಸಮಯದಲ್ಲಿ ಮತ್ತು ಕ್ರಮಬದ್ಧವಾಗಿ ಪೂಜಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ.

ಪಂಚಾಂಗದ ಪ್ರಕಾರ ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಅಮವಾಸ್ಯೆಯು 2021 ರ ನವೆಂಬರ್‌ 4 ರಂದು ಬಂದಿದೆ. ಈ ದಿನ ಚಂದ್ರನು ತುಲಾ ರಾಶಿಯಲ್ಲಿ ತನ್ನ ಸಂಚಾರವನ್ನು ಮಾಡುತ್ತಾನೆ.

ABOUT THE AUTHOR

...view details