ಕರ್ನಾಟಕ

karnataka

ETV Bharat / bharat

ಆಡಳಿತ ಪಕ್ಷಗಳ ಪರ ಕೆಲ ಪೊಲೀಸರು ಕೆಲಸ ಮಾಡುತ್ತಿರುವುದು ಮುಜುಗರ ಉಂಟು ಮಾಡುತ್ತಿದೆ: ಸುಪ್ರೀಂಕೋರ್ಟ್‌ ಬೇಸರ - ದೆಹಲಿ

ಆಡಳಿತ ಪಕ್ಷದ ಪರವಾಗಿ ನಿಂತು ವಿರೋಧ ಪಕ್ಷದವರಿಗೆ ಕೆಲ ಪೊಲೀಸರು ಕಿರುಕುಳ ನೀಡುತ್ತಿರುವ ಸಂಪ್ರದಾಯ ಮುಜುಗರ ಉಂಟುಮಾಡುತ್ತಿದೆ ಎಂದು ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ.

disturbing trend that police side with ruling party says chief justice
ಆಡಳಿತ ಪಕ್ಷಗಳ ಪರ ಕೆಲ ಪೊಲೀಸರು ಕೆಲಸ ಮಾಡುತ್ತಿರುವುದು ಮುಜುಗರ ಉಂಟು ಮಾಡುತ್ತಿದೆ: ಸುಪ್ರೀಂ ಕೋರ್ಟ್‌ ಬೇಸರ

By

Published : Aug 26, 2021, 4:23 PM IST

ನವದೆಹಲಿ: ಕೆಲ ಪೊಲೀಸ್‌ ಅಧಿಕಾರಿಗಳು ಆಡಳಿತ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಛತ್ತೀಸ್‌ಗಢದ ಸರ್ಕಾರದಿಂದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ, ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು, ಪ್ರಕರಣಗಳ ನೋಂದಣಿಗೆ ಪೊಲೀಸ್ ಇಲಾಖೆಯೇ ಜವಾಬ್ದಾರರಾಗಿರಬೇಕು. ಅವರ ನಡವಳಿಕೆ ಮುಜುಗರ ಉಂಟುಮಾಡುವಂತಿದೆ ಎಂದಿದೆ.

ಆಡಳಿತ ಪಕ್ಷದ ಪರ ಪೊಲೀಸರು ಕೆಲಸ ಮಾಡುವುದು ಆತಂಕಕಾರಿಯಾಗಿದೆ. ಇಂತಹ ಸಂಪ್ರದಾಯವನ್ನು ನಿಲ್ಲಿಸಬೇಕು. ಹಲವು ರಾಜ್ಯಗಳಲ್ಲಿ ರಾಜಕೀಯ ಪ್ರೇರಿತ ಪ್ರಕರಣಗಳು ವರದಿಯಾಗುತ್ತಿವೆ. ಅಧಿಕಾರ ಬದಲಾದ ತಕ್ಷಣ ಕೆಲವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಆಡಳಿತ ಪಕ್ಷದ ನಾಯಕರ ಪರ ಕೆಲಸ ಮಾಡಲು ಯಾವುದಕ್ಕೂ ತಯಾರಿ ಇರುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದ ನಾಯಕರ ರಾಜಕೀಯ ವಿರೋಧಿಗಳಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ 6 ವಾರ ಮುಂದೂಡಿದ ಸುಪ್ರೀಂಕೋರ್ಟ್

ಐಪಿಎಸ್ ಗುರ್ಜಿಂದರ್ ಪಾಲ್ ಸಿಂಗ್ ಅವರನ್ನು ಬಂಧಿಸಬೇಡಿ. ಗುರ್ಜಿಂದರ್ ಪೊಲೀಸ್‌ ತನಿಖೆಗೆ ಸಹಕರಿಸಬೇಕು. ಛತ್ತೀಸ್‌ಗಢ ಸರ್ಕಾರವು ನಾಲ್ಕು ವಾರಗಳಲ್ಲಿ ಈ ಪ್ರಕರಣದ ಬಗ್ಗೆ ವಿವರಣೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ABOUT THE AUTHOR

...view details