ನರ್ಕಟ್ಪಲ್ಲಿ:ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಹೆತ್ತ ಮಗುವನ್ನೇ ಪಾಪಿ ತಾಯಿಯೊಬ್ಬಳು ತನ್ನ ಪ್ರಿಯಕರ ಸಹಾಯದಿಂದ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ನಲಕೊಂಡ ಜಿಲ್ಲೆಯ ನರ್ಕಟ್ಪಲ್ಲಿಯಲ್ಲಿ ಬೆಳಕಿಗೆ ಬಂದಿದೆ. ಎರಡು ವರ್ಷದ ಕಂದಮ್ಮನ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಮಗು ರೋಗದಿಂದ ಸಾವನ್ನಪ್ಪಿದೆ ಎಂದು ತಾಯಿ ಕಥೆ ಕಟ್ಟಿದ್ದಾಳೆ. ಬಳಿಕ ಪೊಲೀಸರ ತನಿಖೆಯಿಂದ ಈ ದುಷ್ಕೃತ್ಯ ಬಯಲಾಗಿದೆ.
2015ರಲ್ಲಿ ರಮ್ಯಾ ಎಂಬಾಕೆ ಉಯ್ಯಲಾ ವೆಂಕಣ್ಣನನ್ನು ಮದುವೆಯಾಗಿದ್ದಳು. ಅವರಿಗೆ ಐದು ವರ್ಷದ ಮಗ ಮತ್ತು ಎರಡು ವರ್ಷದ ಪ್ರಿಯಾಂಶಿಕ ಎಂಬ ಮಗಳು ಇದ್ದಳು. ವೆಂಕಣ್ಣ 2022ರಲ್ಲಿ ಕೋವಿಡ್ನಿಂದಾಗಿ ಸಾವನ್ನಪ್ಪಿದ. ಬಳಿಕ ರಮ್ಯಾ ತನ್ನ ಮಗಳೊಂದಿಗೆ ಅತ್ತೆ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದಳು.
ಈ ವೇಳೆ ಆಕೆಗೆ ಪೆರಿಕ ವೆಂಕಣ್ಣ ಆಲಿಯಾಸ್ ವೆಂಕಟೇಶ್ವರಲು ಜೊತೆ ಅಕ್ರಮ ಸಂಬಂಧ ಬೆಳೆದಿದೆ. ಈ ವೇಳೆ ಅತ್ತೆ ಮನೆ ಬಿಟ್ಟು ಆಕೆ ಅದೇ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಕ್ಕೆ ಮುಂದಾದಳು. ಈ ವೇಳೆ ತನ್ನ ಅಕ್ರಮ ಸಂಬಂಧವನ್ನು ಆಕೆ ಮುಂದುವರೆಸಿದ್ದಳು. ಈ ವೇಳೆ ಅವರ ಈ ಸಂಬಂಧಕ್ಕೆ ಎರಡು ವರ್ಷದ ಮಗು ಅಡ್ಡಿಯಾಗುತ್ತಿದೆ ಎಂದು ಭಾವಿಸಿ, ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದಾಳೆ. ಈ ವೇಳೆ ಮುಂದಾಲೋಚನೆಯಿಂದ ಒಂದು ವೇಳೆ ನನ್ನ ಮಕ್ಕಳಿಗೆ ಏನಾದರೂ ಆದರೆ, ಗ್ರಾಮಸ್ಥರು ಮತ್ತು ಅತ್ತೆ ಮನೆಯವರೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ
ಡಿ.14ರಂದು ರಮ್ಯಾ ಮತ್ತು ವೆಂಕಟೇಶ್ವರಲು ಯೋಜನೆ ರೂಪಿಸಿ ಪ್ರಿಯಾಂಶಿಕಗಳನ್ನು ಕೊಲೆ ಮಾಡಿದ್ದಾರೆ. ಬಳಿಕ ನಲಗೊಂಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರು ರೋಗದಿಂದ ಆಕೆ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ವೈದ್ಯರು ಕೂಡ ಆಕೆ ಸಾವನ್ನು ಖಚಿತಪಡಿಸಿ, ಶವಾಗಾರಕ್ಕೆ ಸಾಗಿಸಿದ್ದಾರೆ. ಮೊಮ್ಮಗಳ ಮುಖದಲ್ಲಿನ ಹೊಡೆತವನ್ನು ಗಮನಿಸಿದ ತಾತ, ಸೊಸೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಯಲಾಗಿದೆ.
ಇದನ್ನು ಓದಿ:ಗಂಡನ ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ: ಒಂದೂವರೆ ವರ್ಷದ ಮಗು ಜೊತೆ ತಾಯಿ ಆತ್ಮಹತ್ಯೆ