ಅಲಿಗಢ (ಉತ್ತರ ಪ್ರದೇಶ) : ಹರ್ದುವಾಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಚುವಾ ಗ್ರಾಮದಲ್ಲಿ ಬುಧವಾರ ಜಮೀನುಗಳಿಗೆ ನೀರು ಹರಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಜಗಳ ನಡೆದಿದೆ. ದರೋಡೆಕೋರರು ಒಂದು ಸಮುದಾಯದ ಮೇಲೆ ಹಲ್ಲೆ ನಡೆಸಿ, ಗುಂಡಿನ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ ವಿವಸ್ತ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಂಧ ಹರ್ದುಗಂಜ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ನಾಲ್ವರ ವಿರುದ್ಧ ಕಾಯ್ದೆ 323, 504, 506, 354 (ಬಿ), 307 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ 1989 ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಇನ್ನೊಂದೆಡೆ ಈ ವಿಚಾರದಲ್ಲಿ ರಾಜಕೀಯವೂ ಶುರುವಾಗಿದೆ. ಸಂತ್ರಸ್ತ ಕುಟುಂಬಕ್ಕೆ ಎಸ್ಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಜನರು ಭೇಟಿ ನೀಡುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವರ: ಮಚುವಾ ಗ್ರಾಮದ ನಿವಾಸಿ ದೇವಪ್ರಕಾಶ್, ಹರ್ದುವಾಗಂಜ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಮಂಗಳವಾರ ತನ್ನ ಸೋದರಳಿಯ ಲವಕುಶ ಮತ್ತು ಲೋಕೇಶ್ ಸರ್ಕಾರಿ ಕಾಲುವೆ ಮೂಲಕ ಜಮೀನಿಗೆ ನೀರು ಬಿಡುತ್ತಿದ್ದರು. ಆ ವೇಳೆ ವಿನಯ್, ದಬಾಂಗ್ ಎಂಬುವರ ಮಗ ವಿನಯ್ ತಂದೆ ಕೈಯಲ್ಲಿ ಸಲಿಕೆ, ಕೋಲು ಮತ್ತು ರೈಫಲ್ ಅನ್ನು ತಂದು ಕಾಲುವೆಯ ನೀರನ್ನು ಅವರ ಜಮೀನಿಗೆ ಬಿಡಲು ಮುಂದಾದರು. ಇದನ್ನು ವಿರೋಧಿಸಿದಾಗ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಜಮೀನಿಗೆ ನೀರು ಹರಿಸುವ ವಿಚಾರ ದೂರಿನಲ್ಲಿ ಮಹಿಳೆ ಹೇಳಿರುವುದೇನು?:ಗುಂಡಿನ ದಾಳಿ ನಡೆಸಿದ್ದಲ್ಲದೇ ಜಾತಿ ಸಂಬಂಧಿ ಪದಗಳಿಂದ ಅವಮಾನಿಸಿದ್ದಾರೆ. ಕಿರುಚಾಟ ಕೇಳಿ ಲವಕುಶ ತಂದೆ ರಾಮ್ ಪ್ರಸಾದ್ ಮತ್ತು ಆತನ ಪತ್ನಿ ಸ್ಥಳಕ್ಕೆ ಬಂದರು. ಆಗ ವಿನಯ್ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದಾನೆ. ಬಳಿಕ ಬೆದರಿಸಿ ಅಲ್ಲಿಂದ ತೆರಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಠಾಕೂರ್ ಸಮಾಜದ ಪುಂಡರು ನೀರು ಕಡಿಯಲು ಬಿಡಲಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ. ನೀರಾವರಿಗೆ ನೀರು ಬಳಸಿಕೊಳ್ಳಲು ಅವಕಾಶ ನೀಡದ ರೌಡಿಗಳು ಜಾತಿ ಪದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಘಟನೆಯ ನಂತರ ರಾಜಕೀಯ ವ್ಯಕ್ತಿಗಳೂ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಬರುತ್ತಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಚಿವ ಮತ್ತು ಪ್ರಸ್ತುತ ಆಜಾದ್ ಸಮಾಜ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಚೌಧರಿ ಮಹೇಂದ್ರ ಸಿಂಗ್ ಕೂಡ ಸಂತ್ರಸ್ತರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಸಮಾಜವಾದಿ ಪಕ್ಷದ ಪದಾಧಿಕಾರಿಗಳು ಸಹ ಸಂತ್ರಸ್ತರ ಮನೆಗೆ ಧಾವಿಸಿದ್ದಾರೆ.
ಅಲಿಗಢ್ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಬನ್ಸಾಲ್ ಅವರು ಪ್ರತಿಕ್ರಿಯಿಸಿ, ಹರ್ದುಗಂಜ್ ಪೊಲೀಸ್ ಠಾಣೆಯ ಮಚುವಾ ಗ್ರಾಮದಿಂದ ನೀರಿನ ಬಗ್ಗೆ ಎರಡು ಪಕ್ಷಗಳ ನಡುವೆ ವಿವಾದವಿದೆ. ಜಗಳದಿಂದಾಗಿ ಒಂದು ಕಡೆಯ ಇಬ್ಬರ ತಲೆಗೆ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಕಡೆಯಿಂದ ದೂರು ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರ ಎರಡು ತಂಡಗಳು ನಿರತವಾಗಿವೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: 60 ವರ್ಷ ಹಿಂದೆ ಕಳವಾಗಿದ್ದ ವಿಗ್ರಹ ವಾಷಿಂಗ್ಟನ್ನಲ್ಲಿ ಪತ್ತೆ: ಮರಳಿ ತರಲು ಭಾರತ ಪ್ರಯತ್ನ