ಕರ್ನಾಟಕ

karnataka

ETV Bharat / bharat

ನದಿಗಳಲ್ಲಿ ಶವಗಳ ವಿಲೇವಾರಿ : ಯುಪಿ-ನೇಪಾಳ ಪೊಲೀಸರಿಂದ ಜಾಗೃತಿ - ಉತ್ತರಪ್ರದೇಶ

ನೇಪಾಳಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ " ಅಂತ ಸುಜೌಲಿ ಸ್ಟೇಷನ್ ಹೌಸ್ ಅಧಿಕಾರಿ ಒ.ಪಿ ಚೌಹಾಣ್​ ಹೇಳಿದ್ದಾರೆ..

ಗಂಗೆಯಲ್ಲಿ ಶವಗಳ ರಾಶಿ
ಗಂಗೆಯಲ್ಲಿ ಶವಗಳ ರಾಶಿ

By

Published : May 24, 2021, 3:27 PM IST

ಬಹ್ರೇಚ್(ಯುಪಿ): ಉತ್ತರಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುವ ಕುರಿತು ಪೊಲೀಸರು ನೇಪಾಳದ ಗಡಿ ಭಾಗದ ಜನರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುತ್ತಿರುವ ಕುರಿತು ಪೊಲೀಸರು, ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ್), ನೇಪಾಳದ ಭದ್ರತಾ ಸಿಬ್ಬಂದಿ ಮತ್ತು ಉಭಯ ದೇಶಗಳ ಪುರೋಹಿತರೊಂದಿಗೆ ಅನಧಿಕೃತ ಚರ್ಚೆ ನಡೆಸಲಾಗಿದೆ.

ನೇಪಾಳಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ " ಅಂತ ಸುಜೌಲಿ ಸ್ಟೇಷನ್ ಹೌಸ್ ಅಧಿಕಾರಿ ಒ.ಪಿ ಚೌಹಾಣ್​ ಹೇಳಿದ್ದಾರೆ

ಉತ್ತರಪ್ರದೇಶದ ಬಹ್ರೇಚ್ ನೇಪಾಳದ ಗಡಿಯನ್ನು ಹಂಚಿಕೊಂಡಿದೆ. ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಶಂಭು ಕುಮಾರ್ ಹೇಳಿದ್ದಾರೆ.

ಪೊಲೀಸರು ಮತ್ತು ಎಸ್‌ಎಸ್‌ಬಿ ಅಧಿಕಾರಿಗಳು ಭಾರತದ ಕಡೆಯ ಹಳ್ಳಿಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಮೃತರ ಅಂತಿಮ ವಿಧಿಗಳನ್ನು ನಡೆಸಬೇಕೆಂದು ಜನರಿಗೆ ತಿಳಿಸಿದ್ದಾರೆ. ಬದಲಾಗಿ ನದಿಗಳಲ್ಲಿ ಶವಗಳನ್ನು ವಿಲೇವಾರಿ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ದುರ್ಬಲ ವರ್ಗದ ಸಮಾಜದಿಂದ ಬಂದ ಜನರ ಅಂತಿಮ ವಿಧಿಗಳನ್ನು ನಡೆಸಲು ರಾಜ್ಯ ಸರ್ಕಾರ ಈಗಾಗಲೇ 5,000 ರೂ.ಗಳ ನೆರವು ಘೋಷಿಸಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು ಎಂದು ಚೌಹಾಣ್​ ಹೇಳಿದರು.

ABOUT THE AUTHOR

...view details