ಕರ್ನಾಟಕ

karnataka

ETV Bharat / bharat

ವಿಶ್ವಗುರುವಾಗುವ ಭಾರತದ ಪ್ರಗತಿ ತಡೆಯಲು ಅಪಪ್ರಚಾರ: ಮೋಹನ್ ಭಾಗವತ್ - etv bharata kannada

ಜಗತ್ತಿನಲ್ಲಿ ಯಾರೂ ತರ್ಕದ ಆಧಾರದ ಮೇಲೆ ನಮ್ಮೊಂದಿಗೆ ವಾದಿಸಲು ಸಾಧ್ಯವಿಲ್ಲ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Etv Bharatdisinformation-being-spread-to-stop-indias-progress-says-bhagwat
ವಿಶ್ವಗುರು ಆಗುವ ಭಾರತದ ಪ್ರಗತಿಯನ್ನು ತಡೆಯಲು ಅಪಪ್ರಚಾರ ಮಾಡಲಾಗುತ್ತಿದೆ:ಮೋಹನ್ ಭಾಗವತ್

By

Published : Apr 9, 2023, 10:48 PM IST

ಮುಂಬೈ(ಮಹಾರಾಷ್ಟ): "ಭಾರತ ದೇಶವು ವಿಶ್ವಗುರು ಆಗುವುದನ್ನು ತಡೆಯಲು ತಪ್ಪು ಕಲ್ಪನೆಗಳನ್ನು ಮತ್ತು ತಿರುಚಿದ ಮಾಹಿತಿಯನ್ನು ಹರಡಲಾಗುತ್ತಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, "1857 ರ (ಮೊದಲ ಸ್ವಾತಂತ್ರ್ಯ ಸಂಗ್ರಾಮದ) ನಂತರ ದೇಶದ ಬಗ್ಗೆ ಇಂತಹ ತಪ್ಪು ಕಲ್ಪನೆಗಳನ್ನು ಹರಡಲಾಯಿತು. ಆದರೆ ಅಂತಹ ವಿಚಾರಗಳಿಗೆ ಸ್ವಾಮಿ ವಿವೇಕಾನಂದರಿಂದ ಸೂಕ್ತ ಉತ್ತರ ಸಿಕ್ಕಿತು" ಎಂದು ಹೇಳಿದರು. "ನಮ್ಮ ಪ್ರಗತಿಯನ್ನು ನಿಧಾನಗೊಳಿಸಲು ತಪ್ಪು ಗ್ರಹಿಕೆಗಳನ್ನು ಹರಡಲಾಗುತ್ತಿದೆ. ಏಕೆಂದರೆ ಜಗತ್ತಿನಲ್ಲಿ ಯಾರೂ ತರ್ಕದ ಆಧಾರದ ಮೇಲೆ ನಮ್ಮೊಂದಿಗೆ ವಾದಿಸಲು ಸಾಧ್ಯವಿಲ್ಲ" ಎಂದು ಅವರು ಅಭಿಪ್ರಾಯಪಟ್ಟರು.

"ಮುಂದಿನ 20-30 ವರ್ಷಗಳಲ್ಲಿ ನಾವು ವಿಶ್ವಗುರುವಾಗಲಿದ್ದೇವೆ. ಅದಕ್ಕಾಗಿ ಬದಲಾವಣೆಗೆ ಅಣಿಯಾಗಲು ಕನಿಷ್ಠ ಎರಡು ತಲೆಮಾರುಗಳನ್ನು ನಾವು ಸಿದ್ಧಪಡಿಸಬೇಕಾಗಿದೆ ಎಂದು ಭಾಗವತ್ ಕರೆ ಕೊಟ್ಟರು. ಭಾರತವು ಹಲವು ವರ್ಷಗಳಿಂದ ಸಾಕಷ್ಟು ಸಾಧಿಸಿದೆ, ಆದರೆ ತಿರುಚಿದ ಮಾಹಿತಿಯನ್ನು ಜಾಗತಿಕವಾಗಿ ಹರಡಲಾಗುತ್ತಿದೆ. ಇದನ್ನು ಎದುರಿಸಲು ದೇಶವು ಮುಂದಿನ ತಲೆಮಾರುಗಳನ್ನು ಸಿದ್ಧಪಡಿಸಬೇಕಾಗಿದೆ. ವಿಶ್ವದ ಅತ್ಯುತ್ತಮ ಮಿದುಳುಗಳನ್ನು ನಮ್ಮ ಕಡೆಗೆ ಆಕರ್ಷಿಸಬೇಕಾಗಿದೆ" ಎಂದು ಭಾಗವತ್ ಹೇಳಿದರು. "1857 ರ ನಂತರ, ನಮ್ಮ ವಿರುದ್ಧ ಕೆಲವು ತಪ್ಪು ಕಲ್ಪನೆಗಳನ್ನು ಹರಡಲಾಯಿತು. ನಮ್ಮನ್ನು ಕೀಳಾಗಿ ನೋಡಿದವರಿಗೆ ಸ್ವಾಮಿ ವಿವೇಕಾನಂದರು ಸೂಕ್ತ ಉತ್ತರ ನೀಡಿದ್ದರು" ಎಂದು ಆರ್​ಎಸ್​ಎಸ್​ ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ:ಬಾಲಕನಿಗೆ ನಾಲಿಗೆ ಹೀರಲು ಸೂಚಿಸಿದ ದಲೈಲಾಮ: ನೆಟ್ಟಿಗರಿಂದ ಪರ-ವಿರೋಧ ಪ್ರತಿಕ್ರಿಯೆ

ABOUT THE AUTHOR

...view details