ನವದೆಹಲಿ: ದೆಹಲಿ ರೈತರ ಪ್ರತಿಭಟನೆ ಸಂಬಂಧ ಟೂಲ್ಕಿಟ್ ಶೇರ್ ಮಾಡಿದ್ದ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಬೆಂಗಳೂರು ಮೂಲದ ದಿಶಾ ರವಿಗೆ ಪೋಷಕರೊಂದಿಗೆ ಮಾತುಕತೆಗೆ ಅವಕಾಶ ನೀಡಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿ ಪೋಷಕರೊಂದಿಗೆ ಮಾತನಾಡಲು ದಿಶಾ ರವಿಗೆ ಅವಕಾಶ - ದೆಹಲಿ ಪ್ರತಿಭಟನೆ
18:24 February 16
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನಿಂದ ಆದೇಶ
ಈ ಸಂಬಂಧ ದೆಹಲಿಯ ಪಟಿಯಾಲ ಹೌಸ್ಕೋರ್ಟ್ ಆದೇಶ ಹೀಡಿದೆ. 15 ನಿಮಿಷಗಳ ಕಾಲ ಪೋಷಕರೊಂದಿಗೆ ಮಾತುಕತೆ ನಡೆಸುವ ಅವಕಾಶ ನೀಡಿದೆ.
ಇದಲ್ಲದೇ ಕಷ್ಟಡಿ ವೇಳೆ ದಿಶಾ ರವಿಗೆ ಬೆಚ್ಚಗಿನ ಹೊದಿಕೆ, ಮಾಸ್ಕ್, ಪುಸ್ತಕಗಳ ಬಳಸಿಕೊಳ್ಳಲು ಸಹ ಅನುಮತಿ ನೀಡಲಾಗಿದೆ. ಟೂಲ್ಕಿಟ್ ವಿಚಾರದಲ್ಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿಯನ್ನೂ ಸಹ ಆಕೆಗೆ ನೀಡಲು ಅನುಮತಿ ನೀಡಲಾಗಿದೆ.
ಬೆಗಳೂರಿನಲ್ಲಿ ಬಂಧಿತಳಾದ ದಿಶಾ ರವಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ದಿಶಾಳನ್ನು 5 ದಿನಗಳ ಕಾಲ ದೆಹಲಿ ಪೊಲೀಸರ ವಿಶೇಷ ಸೆಲ್ ಕಸ್ಟಡಿಗೆ ಒಪ್ಪಿಸಿತ್ತು.
ಇದನ್ನೂ ಓದಿ:'ಟೂಲ್ಕಿಟ್' ಅಪ್ಲೋಡ್ ಆರೋಪ: ದಿಶಾ ರವಿ ಅರೆಸ್ಟ್, ಐದು ದಿನ ಪೊಲೀಸ್ ಕಸ್ಟಡಿಗೆ