ತ್ರಿಪುರ/ಅಗರ್ತಲಾ: ರಾಜ್ಯ ಬಿಜೆಪಿಯ ಪಕ್ಷಪಾತದಿಂದ ಅಸಮಾಧಾನಗೊಂಡ, ಆಡಳಿತಾರೂಢ ಬಿಜೆಪಿಯ 450 ಸದಸ್ಯರು ಸೇರಿ ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು 450ಕ್ಕೂ ಹೆಚ್ಚು ಸದಸ್ಯರ ರಾಜೀನಾಮೆ - BJP members quit party
ಬಿಜೆಪಿಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿ 450 ಸದಸ್ಯರು ಸೇರಿ ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಘಟನೆ ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ.
ಬಿಜೆಪಿಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು 450 ಕ್ಕೂ ಹೆಚ್ಚು ಸದಸ್ಯರ ರಾಜೀನಾಮೆ
ಬಿಶಾಲ್ಗರ್ದ ಉಪವಿಭಾಗದ ವ್ಯಾಪ್ತಿಯ ಪುರ್ಬಾ ಗೋಕುಲ್ ನಗರ ಪಂಚಾಯಿತಿ ಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಪದೇ ಪದೆ ಒಂದು ಗುಂಪನ್ನು ಮಾತ್ರ ಪೋಷಿಸುತ್ತಿದ್ದಾರೆ. ಇದರಿಂದಾಗಿ ಬೇಸತ್ತ ನಾವು ಪಕ್ಷ ತೊರೆಯುತ್ತಿದ್ದೇವೆ ಎಂದಿದ್ದಾರೆ.
ಜುಬಾ ಮೋರ್ಚಾ ಬೆಂಬಲಿಗರು ತಮ್ಮದೇ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸಹಿಸಲಾಗುವುದಿಲ್ಲ. ಕೆಲ ಯುವಕರು ಜುಬಾ ಮೋರ್ಚಾ ಹೆಸರಿನಲ್ಲಿ ಈ ಪ್ರದೇಶದಲ್ಲಿ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ನಮಗೆ ರಕ್ಷಣೆ ಇಲ್ಲದ ಕಾರಣ ಪಕ್ಷವನ್ನು ತೊರೆಯುತ್ತಿದ್ದೇವೆ ಎಂದಿದ್ದಾರೆ.