ಜಪಾನ್:ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕ ಬೇಟೆ ಭರ್ಜರಿಯಾಗಿ ಸಾಗಿದೆ.
ಡಿಸ್ಕಸ್ ಪಂದ್ಯದ F56 ವಿಭಾಗದಲ್ಲಿ ಯೋಗೀಶ್ ಕಥುನಿಯಾ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಈ ಸಂದರ್ಭದಲ್ಲಿ ಭಾವುಕರಾದ ಅವರು, "ಭಾರತದ ಪ್ಯಾರಾಲಿಂಪಿಕ್ ಕಮಿಟಿ ಮತ್ತು ವಿಶೇಷವಾಗಿ ನನ್ನ ತಾಯಿಯ ಬೆಂಬಲಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಯೋಗೀಶ್ ತಾಯಿಯೂ ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಬೆಳ್ಳಿ ಪದಕ ನನಗೆ ಚಿನ್ನದ ಪದಕಕ್ಕೆ ಸಮಾನ. ಇಂದು, ನನ್ನ ಸಂತೋಷಕ್ಕೆ ಮಿತಿಯಿಲ್ಲ" ಎಂದು ಮೀನಾ ದೇವಿ ಹೇಳಿದ್ದಾರೆ.
ಜಾವೆಲಿನ್ ಥ್ರೋ ಕ್ಲಾಸ್ ಎಫ್ 45ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಪದಕ ಗೆದ್ದರೆ ಸುಂದರ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ.
ಈಗಾಗಲೇ ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್‌ನಲ್ಲಿ ಅವಾನಿ ಲೇಖರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.