ನವದೆಹಲಿ: ಕೋ-ವಿನ್ 2.0 ಲಸಿಕಾ ನೋಂದಣಿಗಾಗಿ ಅಂಗವೈಕಲ್ಯ ಗುರುತಿನ (ಯುಡಿಐಡಿ) ಕಾರ್ಡ್‌ಗಳನ್ನು ಗುರುತಿನ ಚೀಟಿಯಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಂಗವೈಕಲ್ಯದ ಗುರುತಿನ ಚೀಟಿ ಮೂಲಕವೂ ಕೋ-ವಿನ್ ಲಸಿಕೆ ಪಡೆಯಬಹುದು: ಸಚಿವಾಲಯ ಪ್ರಕಟಣೆ - ಕೋ-ವಿನ್ 2.0 ಲಸಿಕಾ ನೋಂದಣಿ
ಕೋ-ವಿನ್ ನೋಂದಣಿಗೆ ಅಂಗವೈಕಲ್ಯ ಗುರುತಿನ (ಯುಡಿಐಡಿ) ಕಾರ್ಡ್‌ಗಳನ್ನು ಫೋಟೋ ಐಡಿಯಾಗಿ ಬಳಸಬಹುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

disability-identification-card-can-be-used-as-photo-id-for-co-win-registration
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ವಿಕಲಾಂಗ ವ್ಯಕ್ತಿಗಳಿಗೆ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಯುಡಿಐಡಿ ಕಾರ್ಡ್ ನೀಡಲಾಗುತ್ತದೆ ಅದರಲ್ಲಿ ಹೆಸರು, ವರ್ಷ ಮುಂತಾದ ಎಲ್ಲ ಅಗತ್ಯ ಮಾಹಿತಿ ಇರುತ್ತದೆ ಈ ಹಿನ್ನೆಲೆ ಇದನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೂಫ್ ಆಗಿ ಬಳಕೆ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ.
ಹಾಗೆಯೇ ಕೋವಿಡ್ ವ್ಯಾಕ್ಸಿನೇಷನ್ಗಾಗಿ ಈ ಕಾರ್ಡ್ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ರಾಜ್ಯಗಳು / ಯುಟಿಗಳಿಗೆ ಸಚಿವಾಲಯ ಸೂಚಿಸಿದೆ.