ರಾಂಚಿ (ಜಾರ್ಖಂಡ್): ಪೊಲೀಸ್ ಸಿಬ್ಬಂದಿಯೊಬ್ಬ ಕುಡಿದ ಅಮಲಿನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.
‘ಪೋಲಿ’ ಪೊಲೀಸಪ್ಪನಿಗೆ ಹಿಗ್ಗಾಮುಗ್ಗ ಜಾಡಿಸಿದ ಜನತೆ ನಗರದ ಆಲ್ಟರ್ಟ್ ಎಕ್ಕಾ ಚೌಕದಲ್ಲಿ ಪೊಲೀಸ್ ಸಿಬ್ಬಂದಿ, ಮದ್ಯ ಸೇವಿಸಿದ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ನೆಲಕ್ಕೆ ಉರುಳಿದ ಬಳಿಕವೂ ಆತನಿಗೆ ಕಾಲಿನಿಂದ ಒದ್ದಿದ್ದಾರೆ.
ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ, ಸಿಪಿಎಂ ನಡುವೆ ಘರ್ಷಣೆ: 12 ಮಂದಿಗೆ ಗಾಯ
ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವಕರಿಂದ ಸಿಬ್ಬಂದಿಯನ್ನು ರಕ್ಷಿಸಿ ಠಾಣೆಗೆ ಕರೆದೊಯ್ದು, ಪಿಸ್ತೂಲು, ಬುಲೆಟ್ ವಶಪಡಿಸಿಕೊಂಡಿದ್ದಾರೆ. ರಾಂಚಿ ನಗರ ನಿಲ್ದಾಣದ ಉಸ್ತುವಾರಿ ಶೈಲೇಶ್ ಕುಮಾರ್ ಹಿರಿಯ ಅಧಿಕಾರಿಗೆ ಘಟನೆಯ ಎಲ್ಲ ವಿವರಗಳನ್ನು ನೀಡಿದರು. ಮಾಹಿತಿ ಪಡೆದ ಎಸ್ಎಸ್ಪಿ ಸುರೇಂದ್ರ ಕುಮಾರ್ ಝಾ, ಗದ್ದಲ ಸೃಷ್ಟಿಸಿದ್ದ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.