ತಿರುಮಲ: ನವ ದಂಪತಿಗಳಾದ ವಿಘ್ನೇಶ್ ಶಿವನ್ ಮತ್ತು ನಯನತಾರ ಶುಕ್ರವಾರ ತಿರುಮಲ ಶ್ರೀಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ನಯನತಾರ ಪಾದರಕ್ಷೆ ಧರಿಸಿ ತಿರುಮಲ ದೇವಸ್ಥಾನದ ಆವರಣದಲ್ಲಿ ಸಂಚರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅದ್ಧೂರಿ ಮದುವೆ ಬಳಿಕ ದಂಪತಿಗಳಾದ ನಯನತಾರ ಮತ್ತು ವಿಘ್ನೇಶ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ, ನಯನತಾರ ಮೇಲೆ ಕೇಳಿ ಬಂದ ಗಂಭೀರ ಆರೋಪದ ಬಗ್ಗೆ ಟಿಟಿಡಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ವಿಜಿಲೆನ್ಸ್ ಅಧಿಕಾರಿ ಬಾಲರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನವದಂಪತಿ ನಯನತಾರಾ-ವಿಘ್ನೇಶ್ ಶಿವನ್: ವಿಡಿಯೋ
ದೇವಸ್ಥಾನದ ಕಾನೂನಿನ ಪ್ರಕಾರ ಕ್ರಮ:ದೇವಸ್ಥಾನದ ಆವರಣದಲ್ಲಿ ನಟಿ ನಯನತಾರ ಪಾದರಕ್ಷೆ ಧರಿಸಿ ಬಂದಿರುವುದು ದುರದೃಷ್ಟಕರ. ದೇವಸ್ಥಾನದ ಮುಂದೆ ಫೋಟೋ ಶೂಟ್ ಮಾಡುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ನ್ಯಾಯಶಾಸ್ತ್ರಜ್ಞರ ಸಲಹೆ ಮೇರೆಗೆ ನಯನತಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಫೋಟೋ ತೆಗೆಯುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಯನತಾರಾ ಪಾದರಕ್ಷೆ ಧರಿಸಿ ಬಂದಿರುವುದು ದೇವಸ್ಥಾನದ ಸೇವಕರ ವೈಫಲ್ಯ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಬಾಲರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಕ್ಷಮೆಯಾಚಿಸಿದ ನಯನತಾರಾ-ವಿಘ್ನೇಶ್ ದಂಪತಿ ಕ್ಷಮೆಯಾಚಿಸಿದ ದಂಪತಿ: ಇದರ ಬೆನ್ನಲ್ಲೇ ವಿಘ್ನೇಶ್ ಶಿವನ್ ತಿರುಪತಿ ತಿರುಮಲ ದೇವಸ್ಥಾನಕ್ಕೆ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು, ತಮ್ಮ ಮದುವೆ ತಿರುಪತಿಯಲ್ಲಿ ನಡೆಯಬೇಕೆಂದು ಬಯಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಯಾದ ಬಳಿಕ ನಾವು ಮನೆಗೆ ಹೋಗದೆ ನೇರವಾಗಿ ತಿರುಪತಿಗೆ ಭೇಟಿ ನೀಡಿದ್ದೇವೆ.
ಈ ಸನ್ನಿವೇಶ ನೆನಪಿನಾರ್ಥಕ್ಕೆ ದೇವಸ್ಥಾನದ ಹೊರಗೆ ಫೋಟೋ ತೆಗೆಸಿಕೊಂಡಿದ್ದೇವೆ. ಜನಜಂಗುಳಿಯಿಂದ ನಾವು ಹೊರಟು ಹೋದೆವು. ಬಳಿಕ ಮತ್ತೆ ಫೋಟೋ ತೆಗೆಯಲು ಬಂದಾಗ ಚಪ್ಪಲಿ ಧರಿಸಿರುವುದು ಗೊತ್ತಾಗಲಿಲ್ಲ. ಚಪ್ಪಲಿ ಧರಿಸುವ ಮೂಲಕ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅವರು ಪ್ರೀತಿಸುವ ಭಗವಂತನಿಗೆ ಯಾವುದೇ ಅಗೌರವ ಉಂಟುಮಾಡುವ ಉದ್ದೇಶವಿಲ್ಲ ಎಂದು ಅವರು ಪತ್ರ ಬರೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಓದಿ:ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದ ತಾರಾ ಜೋಡಿಯ ಅದ್ಧೂರಿ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು