ನವದೆಹಲಿ: ನೇರ ಆದಾಯ ತೆರಿಗೆ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿದೆ. 2022-23ರ ಪ್ರಸ್ತುತ ಆರ್ಥಿಕ ಸಾಲಿನಲ್ಲಿ 3.39 ಲಕ್ಷ ಕೋಟಿ ರೂ ನೇರ ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.45ರಷ್ಟು ಹೆಚ್ಚಿನ ತೆರಿಗೆ ಕೇಂದ್ರದ ಬೊಕ್ಕಸ ಸೇರಿದೆ.
ನೇರ ತೆರಿಗೆ ಸಂಗ್ರಹದಲ್ಲಿ ಶೇ 45ರಷ್ಟು ಹೆಚ್ಚಳ; ಜೂನ್ ಮಧ್ಯಮಾವಧಿಗೆ ₹3.39 ಲಕ್ಷ ಕೋಟಿ ಸಂಗ್ರಹ - ಮುಂಗಡ ತೆರಿಗೆ ಸಂಗ್ರಹ
ಕಳೆದ ಆರ್ಥಿಕ ವರ್ಷದಲ್ಲಿ 2.33 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿತ್ತು. 2022-23ರ ಆರ್ಥಿಕ ಸಾಲಿನಲ್ಲಿ 3.39 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಶೇ 45ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ.
ನೇರ ತೆರಿಗೆ ಸಂಗ್ರಹದ ಬಗ್ಗೆ ಹಣಕಾಸು ಇಲಾಖೆ ಮಾಹಿತಿ ನೀಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 2.33 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 30 ಸಾವಿರ ಕೋಟಿ ರೂ.ಗಳಷ್ಟು ಮರುಪಾವತಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೇ, 2020-21ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.171ರಷ್ಟು ನಿವ್ವಳ ತೆರಿಗೆ ಹೆಚ್ಚಳವಾಗಿದೆ.
ಅಲ್ಲದೇ, ಮುಂಗಡ ತೆರಿಗೆ ಸಂಗ್ರಹಗಳಲ್ಲೂ ಭಾರಿ ಏರಿಕೆಯಾಗಿದೆ. ಇದು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ 75 ಕೋಟಿ ರೂ. ಹೆಚ್ಚು ಮುಂಗಡ ತೆರಿಗೆ ಸಂಗ್ರಹಗೊಂಡಿದೆ. ಈ ತೆರಿಗೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದೆ.