ಕರ್ನಾಟಕ

karnataka

ETV Bharat / bharat

ರೈಲ್ವೇ ಉದ್ಯೋಗಿಗಳಿಗೆ ಶುಭ ಸುದ್ದಿ: ಕ್ಲಾಸ್‌ 1 ಗ್ರೇಡ್‌ ನೇರ ಬಡ್ತಿಗೆ ಮೇಲ್ವಿಚಾರಣಾ ಸಿಬ್ಬಂದಿ ಅರ್ಹ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ರೈಲ್ವೆ ಇಲಾಖೆಯ ಮೇಲ್ವಿಚಾರಣಾ ಸಿಬ್ಬಂದಿ ನೇರ ಬಡ್ತಿ ಪಡೆಯಲು ಅರ್ಹರು ಎಂದು ಪ್ರಕಟಿಸಿದ್ದಾರೆ.

Direct Promotion to Supervisory Staff of Railway Department
ರೈಲ್ವೆ ಇಲಾಖೆಯ ಮೇಲ್ವಿಚಾರಾಣಾ ಸಿಬ್ಬಂದಿಗಳಿಗೆ ನೇರ ಬಡ್ತಿ

By

Published : Nov 17, 2022, 7:22 AM IST

ನವದೆಹಲಿ:ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ವಲಯಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ, ಮೇಲ್ವಿಚಾರಣಾ ಸಿಬ್ಬಂದಿಯೂ ಕ್ಲಾಸ್ 1 ಹುದ್ದೆಗಳಿಗೆ ನೇರ ಬಡ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ನಿಯಮದಡಿಯಲ್ಲಿ, ರೈಲ್ವೆ ಗ್ರೇಡ್-6 ನೌಕರರು ಸಹ ನೇರ ಬಡ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ನಮ್ಮಲ್ಲಿ 80,000 ಮೇಲ್ವಿಚಾರಕರು ಇದ್ದಾರೆ. ಕಳೆದ 16 ವರ್ಷಗಳಿಂದ (2006 ರಿಂದ) ಮೇಲ್ವಿಚಾರಣಾ ಸಿಬ್ಬಂದಿಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಇತ್ತು. ಹೊಸ ನಿಯಮದಂತೆ ಶೇ 50 ರಷ್ಟು ಉದ್ಯೋಗಿಗಳಿಗೆ 7 ನೇ ಹಂತದಿಂದ 8ನೇ ಹಂತಕ್ಕೆ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ. 8ನೇ ಹಂತದಿಂದ 9ನೇ ಹಂತಕ್ಕೆ 4 ವರ್ಷ ಕಾರ್ಯನಿರ್ವಹಿಸಿದ 50 ಜನರಿಗೆ ಬಡ್ತಿ ಒದಗಿಸಲಾಗಿದೆ ಎಂದು ತಿಳಿಸಿದರು. ಇದರಿಂದಾಗಿ 40,000 ಮೇಲ್ವಿಚಾರಕರು ನೇರ ಪ್ರಯೋಜನ ಪಡೆಯುತ್ತಾರೆ. ಎಲ್ಲರೂ ತಿಂಗಳಿಗೆ ಸರಾಸರಿ 2,500-4,000 ರೂ.ಗಳ ಹೆಚ್ಚುವರಿ ವೇತನ ಪಡೆಯುತ್ತಾರೆ ಎಂದು ಸಚಿವರು ತಿಳಿಸಿದರು.

ಬಡ್ತಿಯ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳನ್ನು ಗುರುತಿಸಲು ರೈಲ್ವೇ ಇಲಾಖೆ ಪ್ರಾರಂಭಿಸಿದೆ. ಸಿವಿಲ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಸ್ & ಟಿ ಟ್ರಾಫಿಕ್, ಕೆಮಿಕಲ್ ಮತ್ತು ಮೆಟಲರ್ಜಿಕಲ್, ಸ್ಟೋರ್ಸ್ ಮತ್ತು ವಾಣಿಜ್ಯ ಇಲಾಖೆಗಳ ಮೇಲ್ವಿಚಾರಕರಿಗೆ ಇದರ ಲಾಭ ಸಿಗಲಿದೆ.

ಇದನ್ನೂ ಓದಿ:ಮೈಸೂರಿಗೆ ತಲುಪಿದ ವಂದೇ ಭಾರತ್​ ಎಕ್ಸ್​ಪ್ರೆಸ್​: ಜರ್ನಿ ಚೆನ್ನಾಗಿತ್ತು ಎಂದ ಪ್ರಯಾಣಿಕರು

ABOUT THE AUTHOR

...view details