ನವದೆಹಲಿ: 1987ರ ಬ್ಯಾಚ್‌ನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಯೋಗೀಶ್ ಚಂದ್ರ ಮೋದಿ ಅವರಿಂದ ತೆರವಾದ ಸ್ಥಾನ ತುಂಬಿರುವ ಗುಪ್ತಾ, ಮಾರ್ಚ್ 31, 2024 ರವರೆಗೆ NIA ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ಪೊಲೀಸ್ ಮಾಜಿ ಡಿಜಿಪಿ ಆಗಿದ್ದ ಇವರು ಅವರು ಪ್ರಸ್ತುತ ಪಂಜಾಬ್ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಎರಡು ವರ್ಷ ಏಳು ತಿಂಗಳು ಪಂಜಾಬ್ ಡಿಜಿಪಿಯಾಗಿ ಸೇವೆ ಸಲ್ಲಿಸಿದ ಇವರು ಕೇಂದ್ರ ಮಟ್ಟದ ಹುದ್ದೆಗಾಗಿ ಎದುರು ನೋಡುತ್ತಿದ್ದರು.