ಕರ್ನಾಟಕ

karnataka

ETV Bharat / bharat

ನಟ ದಿಲೀಪ್ ಕುಮಾರ್ ಗುಣಮುಖ.. ಆಸ್ಪತ್ರೆಯಿಂದ ಡಿಸ್ಚಾರ್ಜ್..! - ನಟ ದಿಲೀಪ್ ಕುಮಾರ್ ಡಿಸ್ಚಾರ್ಜ್

ದಿಲೀಪ್ ಕುಮಾರ್ ಅವರನ್ನು ಗುರುವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರ ಕುಟುಂಬದ ಸದಸ್ಯರು ಮತ್ತು ಕುಟುಂಬದ ವೈದ್ಯರ ಸಲಹೆ ಮೇರೆಗೆ ಅವರನ್ನು ಇನ್ನೊಂದು ದಿನ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲು ತೀರ್ಮಾನಿಸಿ, ಇಂದು ಡಿಸ್ಚಾರ್ಜ್ ಮಾಡಲಾಗಿದೆ.

Dilip Kumar
ನಟ ದಿಲೀಪ್ ಕುಮಾರ್

By

Published : Jun 11, 2021, 3:45 PM IST

ಹೈದರಾಬಾದ್: ಉಸಿರಾಟದ ತೊಂದರೆಯಿಂದ ಐದು ದಿನಗಳ ಹಿಂದೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​​ನ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 98ರ ಹರೆಯದ ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು, ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.

‘ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರಾರ್ಥನೆಯೊಂದಿಗೆ, ಈ ದಿಲೀಪ್ ಸಾಬ್‌ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾನೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯ ಯಾವಾಗಲೂ ಸಾಹೇಬ್‌ನ ಹೃದಯದಲ್ಲಿರುತ್ತದೆ’ ಎಂದು ದಿಲೀಪ್‌ ಕುಮಾರ್ ಅವರ ಟ್ವಿಟರ್ ನಿರ್ವಹಿಸುವವರು ಪೋಸ್ಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಅನೇಕ ಅಭಿಮಾನಿಗಳು, ವಿಶೇಷವಾಗಿ ಸಿನಿಮಾ ಕ್ಷೇತ್ರದ ಗಣ್ಯರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದಿಲೀಪ್ ಕುಮಾರ್ ಅವರನ್ನು ಗುರುವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರ ಕುಟುಂಬದ ಸದಸ್ಯರು ಮತ್ತು ಕುಟುಂಬದ ವೈದ್ಯರ ಸಲಹೆ ಮೇರೆಗೆ ಅವರನ್ನು ಇನ್ನೊಂದು ದಿನ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲು ತೀರ್ಮಾನಿಸಿ, ಇಂದು ಡಿಸ್ಚಾರ್ಜ್ ಮಾಡಲಾಗಿದೆ.

ಇದನ್ನೂ ಓದಿ:ಕೊರೊನಾಗೆ ಹಿರಿಯ ನಟ ಸುರೇಶ್ ಚಂದ್ರ ಬಲಿ

1944 ರಲ್ಲಿ ‘ಜ್ವಾರ್ ಭಾಟಾ’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ದಿಲೀಪ್ ಕುಮಾರ್, ಮೊಘಲ್- ಎ - ಅಜಮ್, ದೇವದಾಸ್, ನಯಾ ದೌರ್ ಸೇರಿದಂತೆ ಐದು ದಶಕಗಳ ಕಾಲ ಬಾಲಿವುಡ್ ಅನ್ನು ಆಳಿದ್ದಾರೆ. ಇವರಿಗೆ ಹತ್ತಾರು ಪ್ರಶಸ್ತಿಗಳು ಒಲಿದು ಬಂದಿದ್ದು, 1998 ರಲ್ಲಿ ಕೊನೆಯ ಚಿತ್ರ ಕಿಲಾದಲ್ಲಿ ನಟಿಸಿದ್ದರು.

ABOUT THE AUTHOR

...view details