ಕರ್ನಾಟಕ

karnataka

By

Published : Nov 30, 2021, 10:55 AM IST

ETV Bharat / bharat

ಮಮತಾ ಬ್ಯಾನರ್ಜಿ ವಿಪಕ್ಷ ನಾಯಕಿಯಾಗಲು ಬಯಸಿದ್ದಾರೆ: ದಿಲೀಪ್ ಘೋಷ್

ಪ್ರತಿ ಪಕ್ಷವೂ (ವಿರೋಧ ಪಕ್ಷಗಳು) ನಾಯಕತ್ವ ವಹಿಸಲು ಬಯಸುತ್ತದೆ. ಹಾಗೆಯೇ ಮಮತಾ ಬ್ಯಾನರ್ಜಿ ಅವರು ವಿಪಕ್ಷ ನಾಯಕಿಯಾಗಲು ಬಯಸುತ್ತಿದ್ದಾರೆ ಎಂದು ದಿಲೀಪ್ ಘೋಷ್ ಕುಟುಕಿದ್ದಾರೆ.

Dilip Ghosh criticise on Mamata Banerjee
ಮಮತಾ ಬ್ಯಾನರ್ಜಿ ಬಗ್ಗೆ ದಿಲೀಪ್ ಘೋಷ್ ಟೀಕೆ

ಕೋಲ್ಕತ್ತಾ(ಪಶ್ಚಿಮ ಬಂಗಾಳ):ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ವರದಿಯಾಗಿರುವ ಸಮರದ ಕುರಿತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ದಿನಗಳು ಮುಗಿದಿರುವುದರಿಂದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕಿಯಾಗಲು ಬಯಸಿದ್ದಾರೆ ಎಂದು ಟೀಕಿಸಿದ್ದಾರೆ.

"ಈ ನಾಟಕಗಳು ಬಹಳ ಹಳೆಯವು. ಪ್ರತಿ ಪಕ್ಷವೂ (ವಿರೋಧ ಪಕ್ಷಗಳು) ನಾಯಕತ್ವ ವಹಿಸಲು ಬಯಸುತ್ತದೆ. ಹಾಗೆಯೇ ಮಮತಾ ಬ್ಯಾನರ್ಜಿ ಅವರು ನಾಯಕಿಯಾಗಲು ಬಯಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ದಿನಗಳು ಮುಗಿದಿರುವುದರಿಂದ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕಿಯಾಗಲು ಬಯಸಿದ್ದಾರೆ ಎಂದು ಘೋಷ್ ಹೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಶೀತಲ ಸಮರ ಕಾಣುತ್ತಿದೆ. ಇಬ್ಬರ ನಡುವಿನ ಬಿರುಕು ಅವರ ಕಾರ್ಯಗಳಿಂದಲೇ ಕಂಡುಬರುತ್ತಿವೆ. ಇನ್ನು ರಾಜ್ಯಸಭೆಯಿಂದ 12 ವಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಕುರಿತು ಸಂಸತ್ತಿನ ತಮ್ಮ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಕರೆದಿದ್ದ ಸಭೆಗೂ ಟಿಎಂಸಿ ಗೈರು ಹಾಜರಾಗಿತ್ತು. 11 ವಿರೋಧ ಪಕ್ಷಗಳ ಜಂಟಿ ಹೇಳಿಕೆಗೆ ಟಿಎಂಸಿ ಅಂತರ ಕಾಯ್ದುಕೊಂಡು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿತು.

ಇದನ್ನೂ ಓದಿ:2020ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 7ಕ್ಕಿಂತ ಹೆಚ್ಚು ಜಿಡಿಪಿ ನಿರೀಕ್ಷೆ

ಅಲ್ಲದೇ ಇತ್ತೀಚೆಗೆ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿದ್ದರು. ಆದರೆ, ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಮಮತಾ ಬ್ಯಾನರ್ಜಿ, "ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದು ಕಡ್ಡಾಯವೇ?" ಎಂದು ಪ್ರಶ್ನಿಸಿದ್ದರು. ಒಟ್ಟಾರೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಬಿರುಕು ಬಿಟ್ಟಿದ್ದು, ದಿಲೀಪ್ ಘೋಷ್ ಟೀಕಿಸಿದ್ದಾರೆ.

ABOUT THE AUTHOR

...view details