ಕರ್ನಾಟಕ

karnataka

ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಎನ್​ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ

By

Published : Jun 16, 2022, 4:36 PM IST

Updated : Jun 16, 2022, 4:45 PM IST

ಟಿಆರ್​ಎಸ್​, ವೈಎಸ್​ಆರ್​ಸಿಪಿ, ಬಿಜೆಡಿ ಮತ್ತು ಆಮ್ ಆದ್ಮಿ ಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸುವ ಸಾಧ್ಯತೆಗಳಿವೆ. ಆದರೆ ಒಂದೊಮ್ಮೆ ಪ್ರತಿಪಕ್ಷಗಳ ಗುಂಪಿನ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಲ್ಲಿ ಆ ಗುಂಪಿನ ಅಭ್ಯರ್ಥಿಯನ್ನು ಈ ಪಕ್ಷಗಳು ಬೆಂಬಲಿಸುವ ಸಾಧ್ಯತೆಗಳು ಕಡಿಮೆ.

ಅಭ್ಯರ್ಥಿ ಆಯ್ಕೆಗೆ ಎನ್​ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ
ಅಭ್ಯರ್ಥಿ ಆಯ್ಕೆಗೆ ಎನ್​ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ದೇಶದ ಪ್ರಮುಖ ರಾಜಕೀಯ ಪಕ್ಷಗಳು ಪ್ರಯತ್ನಗಳನ್ನು ನಡೆಸುತ್ತಿವೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, 17 ಪ್ರತಿಪಕ್ಷಗಳ ನಾಯಕರೊಂದಿಗೆ ಮೊದಲ ಹಂತದ ಚರ್ಚೆ ಮುಗಿಸಿದ್ದಾರೆ.

ಇನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಕೂಡ ರಾಷ್ಟ್ರಪತಿ ಚುನಾವಣೆಗಾಗಿ ತಾನು ಆಯ್ಕೆ ಮಾಡುವ ಅಭ್ಯರ್ಥಿಗಾಗಿ ಬೆಂಬಲ ಕೋರಲು ಹಲವಾರು ಪ್ರತಿಪಕ್ಷಗಳ ಮುಖಂಡರೊಂದಿಗೆ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಬಹುತೇಕ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ರಾಜನಾಥ್ ಸಿಂಗ್ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರಿಗೆ ಪಕ್ಷ ಈ ಜವಾಬ್ದಾರಿಯನ್ನು ವಹಿಸಿದೆ ಎನ್ನಲಾಗಿದೆ.

ಪ್ರತಿಪಕ್ಷಗಳ ಮನವೊಲಿಕೆ ಜವಾಬ್ದಾರಿ ವಹಿಸಿಕೊಂಡ ರಾಜನಾಥ್​ ಸಿಂಗ್​

ಆದರೆ ಪ್ರತಿಪಕ್ಷಗಳು ಒಮ್ಮತದ ಅಭ್ಯರ್ಥಿಗೆ ಸಮ್ಮತಿ ಸೂಚಿಸದೆ ಜಂಟಿ ಅಭ್ಯರ್ಥಿಯನ್ನು ಹಾಕಲು ಮುಂದಾದರೆ ಯಾವ ರೀತಿಯ ಸಂದರ್ಭ ಉದ್ಭವಿಸಲಿದೆ ಎಂಬುದನ್ನು ಈಗಲೇ ಹೇಳಲಾಗದು.

ಈ ಮಧ್ಯೆ ರಾಷ್ಟ್ರೀಯ ವಿಷಯಗಳ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷವು ಮಮತಾ ಬ್ಯಾನರ್ಜಿಯವರೊಂದಿಗೆ ಒಂದಾಗಿ ಕೆಲಸ ಮಾಡಲು ಒಪ್ಪುತ್ತಿಲ್ಲ. ರಾಷ್ಟ್ರೀಯ ವಿಷಯಗಳ ವಿಚಾರದಲ್ಲಿ ತಾನು ನೇತೃತ್ವ ವಹಿಸಿದಲ್ಲಿ ಹಲವಾರು ಪ್ರತಿಪಕ್ಷಗಳು ಯುಪಿಎ ತೆಕ್ಕೆಗೆ ಬರಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.

ಇನ್ನೊಂದೆಡೆ, ಟಿಆರ್​ಎಸ್​, ವೈಎಸ್​ಆರ್​ಸಿಪಿ, ಬಿಜೆಡಿ ಮತ್ತು ಆಮ್ ಆದ್ಮಿ ಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸುವ ಸಾಧ್ಯತೆಗಳಿವೆ. ಆದರೆ, ಒಂದೊಮ್ಮೆ ಪ್ರತಿಪಕ್ಷಗಳ ಗುಂಪಿನ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಲ್ಲಿ ಆ ಗುಂಪಿನ ಅಭ್ಯರ್ಥಿಯನ್ನು ಈ ಪಕ್ಷಗಳು ಬೆಂಬಲಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿಯೇ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯ ಆಯ್ಕೆಗಾಗಿ ನಡೆದ ಪ್ರಥಮ ಸಭೆ ಮಮತಾ ಬ್ಯಾನರ್ಜಿ ಹಾಗೂ ಶರದ್ ಪವಾರ್ ನೇತೃತ್ವದಲ್ಲಿ ನಡೆಯಿತು ಎಂದು ಹೇಳಲಾಗಿದೆ.

ಪ್ರತಿಪಕ್ಷಗಳ ಸಂಘಟಿಸುತ್ತಿರುವ ಸಿಎಂ ಮಮತಾ ಬ್ಯಾನರ್ಜಿ

ಇನ್ನು ಯುಪಿಎ ಮಾತ್ರವಲ್ಲದೆ ಆಡಳಿತಾರೂಢ ಎನ್​ಡಿಎ ಕೂಡ ಒಮ್ಮತ ಅಭ್ಯರ್ಥಿಯ ಆಯ್ಕೆಗೆ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದ್ದು, ಎನ್​ಡಿಎ ಎಲ್ಲ ಅಂಗಪಕ್ಷಗಳು ಹಾಗೂ ಎನ್​ಡಿಎ ಹೊರಗಿರುವ ಇತರ ಪಕ್ಷಗಳೊಂದಿಗೆ ಸಭೆ ನಡೆಸುವಂತೆ ಅವರಿಗೆ ಪಕ್ಷ ಕೋರಿದೆ ಎಂದು ತಿಳಿದು ಬಂದಿದೆ.

ಗಣಿತ ಇಲ್ಲಿದೆ:ರಾಷ್ಟ್ರಪತಿ ಚುನಾವಣೆಯ ಮತಗಳ ಲೆಕ್ಕಾಚಾರಕ್ಕೆ ಬರುವುದಾದರೆ, ಕಾಂಗ್ರೆಸ್ ಸುಮಾರು ಶೇ.23 ರಷ್ಟು ಮತಗಳನ್ನು ಹಾಗೂ ಎನ್​ಡಿಎ ಮೈತ್ರಿಕೂಟ ಶೇ. 48 ರಷ್ಟು ಮತಗಳನ್ನು ಹೊಂದಿವೆ. ಮೇಲ್ನೋಟಕ್ಕೆ ಎನ್​ಡಿಎ ಈ ವಿಷಯದಲ್ಲಿ ಬಲವಾಗಿದೆ ಎಂದು ತೋರುತ್ತದೆ. ಆದರೆ ಒಂದು ವೇಳೆ ಪ್ರತಿಪಕ್ಷಗಳು ವೈಎಸ್​ಆರ್​ಸಿಪಿ, ಟಿಆರ್​ಎಸ್​, ಬಿಜೆಡಿ ಮತ್ತು ಆಮ್ ಆದ್ಮಿ ಪಕ್ಷಗಳನ್ನು ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾದರೆ ಎನ್​ಡಿಎ ಮೈತ್ರಿಕೂಟಕ್ಕೆ ಆತಂಕ ಶುರುವಾಗಬಹುದು.

ಎನ್​ಡಿಎ ಮೈತ್ರಿಕೂಟದಲ್ಲಿ 20 ಚಿಕ್ಕ ಪಕ್ಷಗಳಿದ್ದು, ಇವುಗಳ ಒಟ್ಟು ಮತ ಮೌಲ್ಯ 10,86,431 ಆಗಿದೆ. ಇವು 5,35,000 ಮತಗಳನ್ನು ತರಬಲ್ಲವು. ಅಂದರೆ ಎನ್​ಡಿಎಗೆ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇನ್ನೂ 13,000 ಮತಗಳು ಬೇಕಾಗುತ್ತವೆ.

ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯ ಕುರಿತಂತೆ ಯಾವುದೇ ಹೇಳಿಕೆಗಳನ್ನು ನೀಡದಂತೆ ತನ್ನ ಎಲ್ಲ ಮುಖಂಡರಿಗೆ ಬಿಜೆಪಿ ಕಟ್ಟುನಿಟ್ಟಾಗಿ ತಾಕೀತು ಮಾಡಿರುವುದರಿಂದ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ.

ಇದನ್ನೂ ಓದಿ:ಪರಿಷತ್​ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್​ ಖರ್ಗೆ

Last Updated : Jun 16, 2022, 4:45 PM IST

ABOUT THE AUTHOR

...view details