ನವದೆಹಲಿ:ಕಳೆದ ಕೆಲ ದಿನಗಳಿಂದ ನಿರಂತರವಾಗಿ ತೈಲ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ ಇದೀಗ ಡಿಸೇಲ್ ಬೆಲೆ ರಾಜ್ಯದಲ್ಲೂ ಸೆಂಚುರಿ ಬಾರಿಸಿದೆ. ತೈಲ ಕಂಪನಿಗಳು ಇಂಧನದ ದರ ಏರಿಕೆ ಮಾಡಿರುವ ಕಾರಣ ಈ ಬೆಳವಣಿಗೆ ಕಂಡು ಬಂದಿದ್ದು, ಕರ್ನಾಟಕದ ಜೊತೆಗೆ ಕೇರಳದಲ್ಲೂ ಡೀಸೆಲ್ 100ರ ಗಡಿ ದಾಟಿದೆ.
ದೇಶದಲ್ಲಿಂದು ಪೆಟ್ರೋಲ್ ಪ್ರತಿ ಲೀಟರ್ಗೆ 30 ಪೈಸೆ ಹಾಗೂ ಡಿಸೇಲ್ 35 ಪೈಸೆ ಏರಿಕೆಯಾಗಿದೆ. ಹೀಗಾಗಿ ಪ್ರತಿ ದಿನ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕದ ದಾವಣಗೆರೆಯಲ್ಲಿ ಡೀಸೆಲ್ ದರ ಲೀಟರ್ಗೆ 100.34ರಷ್ಟಾಗಿದ್ದು, ಶಿವಮೊಗ್ಗದಲ್ಲಿ ಡಿಸೇಲ್ ದರ ಲೀಟರ್ಗೆ 100.12 ಪೈಸೆ ಇದೆ.
ಬೆಂಗಳೂರಿನಲ್ಲಿ ಡಿಸೇಲ್ ಪ್ರತಿ ಲೀಟರ್ಗೆ 98.85 ಪೈಸೆ ಇದೆ. ಒಡಿಶಾ, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮುಂಬೈ, ರಾಜಸ್ಥಾನ ಹಾಗೂ ಲೇಹ್ಗಳಲ್ಲಿ ಡಿಸೇಲ್ ದರ ಈಗಾಗಲೇ 100ರ ಗಡಿ ದಾಟಿದೆ.
ಇದನ್ನೂ ಓದಿರಿ:Gold Price Today : ಚಿನ್ನ, ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ