ಪಾಟ್ನಾ: ಕಳೆದ ಕೆಲವು ವರ್ಷಗಳಿಂದ ಬುಲೆಟ್ ಬೈಕ್ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬುಲೆಟ್ ರೈಡ್ ದುಬಾರಿಯಾಗಿದೆ. 30 ಮೈಲೇಜ್ ನೀಡುವ ನಿಮ್ಮ ಬುಲೆಟ್ 80 ಮೈಲೇಜ್ ನೀಡಿದರೆ ಎಷ್ಟು ಅದ್ಭುತವಾಗಿರುತ್ತದೆ ಅಲ್ವಾ?. ಪಾಟ್ನಾದ ಮೆಕ್ಯಾನಿಕ್ ನಿಮ್ಮ ಈ ಆಸೆಯನ್ನು ಪೂರೈಸಬಲ್ಲರು. ಅವರ ಸಹಾಯದಿಂದ, ನಿಮ್ಮ ಬುಲೆಟ್ 1 ಲೀಟರ್ ಡೀಸೆಲ್‌ನಲ್ಲಿ 80 ಕಿ.ಮೀ ಮೈಲೇಜ್ ನೀಡುತ್ತದೆ.
1998ರ ಮಾದರಿಯ ಡೀಸೆಲ್ ಇಂಜಿನ್ ಬುಲೆಟ್ : ರಾಜಧಾನಿ ಪಾಟ್ನಾದ ಭಟ್ಟಾಚಾರ್ಯ ರಸ್ತೆಯಲ್ಲಿ ಮೆಕ್ಯಾನಿಕ್ ಆಗಿ 65 ವರ್ಷದ ಮೋಹನ್ ಕೆಲಸ ಮಾಡುತ್ತಿದ್ದಾರೆ. ಹಳೆಯ ಬುಲೆಟ್‌ಗಳನ್ನು ಮಾರ್ಪಡಿಸುವ ಮೂಲಕ ತಮ್ಮ ಕೌಶಲ್ಯದಿಂದ ಅಸಾಧ್ಯವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು 1998 ಮಾದರಿಯ ಡೀಸೆಲ್ ಎಂಜಿನ್ ಬುಲೆಟ್ನನ್ನು ಹೊಂದಿದ್ದು, ಇದು 1 ಲೀಟರ್‌ನಲ್ಲಿ 80 ಕಿ.ಮೀ ಮೈಲೇಜ್ ನೀಡುತ್ತದೆ.
ಮೋಹನ್ ಅವರು ಕಳೆದ 50 ವರ್ಷಗಳಿಂದ ಬುಲೆಟ್ ಮೆಕ್ಯಾನಿಕ್ ಆಗಿದ್ದಾರೆ. 15ನೇ ವಯಸ್ಸಿನಿಂದಲೇ ಅವರು ಬುಲೆಟ್ ಸರಿಪಡಿಸುವ ಕೆಲಸ ಮಾಡತೊಡಗಿದರು. ತನ್ನ ಹಳೆಯ ಬುಲೆಟ್ನನ್ನು ಮಾರ್ಪಡಿಸುವ ಮೂಲಕ, ಅವರು ಹೊಸ ಬಿಎಸ್ 5 ಬುಲೆಟ್‌ಗೆ 350 ಸಿಸಿ ನೋಟವನ್ನು ನೀಡಿದ್ದಾರೆ.