ಹೈದರಾಬಾದ್: 2019 ರಲ್ಲಿ ಸಂಜಯ್ ಲೀಲಾ ಭನ್ಸಾಲಿ ನಿರ್ಮಿಸಿದ ಮಲಾಲ್ ಚಿತ್ರದೊಂದಿಗೆ ದೊಡ್ಡ ಪರದೆಯ ಮೇಲೆ ಪದಾರ್ಪಣೆ ಮಾಡಿದ ನಟ ಮೀಜಾನ್, ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅಂದು ಅಂಬೆಗಾಲಿಟ್ಟು ಕ್ಯಾಮರಾದ ಮುಂದೆ ಬಂದಿದ್ದ ನಟ ಇಂದು ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ.
ಮೀಜಾನ್ ಅವರ ಚಿಕ್ಕಪ್ಪ ನವೇದ್ ಜಾಫ್ರಿ 90 ರ ದಶಕದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ಬೂಗೀ ವೂಗಿಯ ಪ್ರಮುಖ ರೂವಾರಿ. ಈ ಪ್ರದರ್ಶನದಲ್ಲಿ ಮೀಜಾನ್ ಅವರ ತಂದೆ ಜಾವೇದ್ ಜೆಫರಿ ಮೂವರು ಜಡ್ಜ್ಗಳಲ್ಲಿ ಇವರೂ ಒಬ್ಬರಾಗಿದ್ದರು. 90ರ ದಶಕದ ಮಕ್ಕಳಿಗಾಗಿ ಈ ಶೋ ನಡೆಯುತ್ತಿತ್ತು ಈ ಪ್ರದರ್ಶನವು ಯುವಕರನ್ನು ಹೆಚ್ಚು ಸೆಳೆಯುತ್ತಿತ್ತು.
ಪ್ರಮುಖ ವಿಷಯ ಎಂದರೆ ಕಾರ್ಯಕ್ರಮದ ಶೀರ್ಷಿಕೆ ಗೀತೆಯಲ್ಲಿ ಎರಡು ವರ್ಷದ ಮೀಜಾನ್ ಕೂಡ ನಟಿಸಿದ್ದರು ಎಂಬುದು ಈವರೆಗೂ ಹಲವರಿಗೆ ತಿಳಿದಿಲ್ಲ. ಈಗಲೂ ಈ ವಿಡಿಯೋ ಲಭ್ಯವಿದ್ದು, ಆ ಪುಟ್ಟ ಕಂದ ಎಂತಹ ನಟನೆ ಮಾಡಿದ್ದಾನೆ ಎಂದು ತಿಳಿಯ ಬಹುದಾಗಿದೆ.
ಸಂದರ್ಶನವೊಂದರಲ್ಲಿ ಮೀಜಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನ್ನ ತಂದೆ, ಚಿಕ್ಕಪ್ಪ ಮತ್ತು ರವಿ ಬೆಹ್ಲ್ ಅವರು ಕಾರ್ಯಕ್ರಮದ ಸ್ಪರ್ಧಿಗಳೊಂದಿಗೆ ನಡೆಸಿದ ಸಂಭಾಷಣೆ ಹಾಗೂ ಅವರು ನಡೆಸಿದ ಕಾರ್ಯಕ್ರಮದಿಂದಲೇ ನಾನು ನೃತ್ಯವನ್ನು ಕಲಿತಿದ್ದೇನೆ ಎಂದು ನಟ ಮೀಜಾನ್ ಹೇಳಿದ್ದಾರೆ.
ಮೀಜಾನ್ ಅವರು ಪ್ರಿಯದರ್ಶನ್ ಅವರ ಮುಂಬರುವ ಚಿತ್ರ ಹಂಗಮಾ 2 ರಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ಕುಂದ್ರಾ, ಮೀಜಾನ್ ಜಾಫ್ರಿ ಮತ್ತು ಪ್ರಣಿತಾ ಸುಭಾಷ್ ಜೊತೆ ನಟಿಸಲಿದ್ದಾರೆ.