ಕರ್ನಾಟಕ

karnataka

ETV Bharat / bharat

ಪನ್ನಾದಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು ಪತ್ತೆ.. ಹರಾಜು ಹಾಕಲು ನಿರ್ಧಾರ - ಪನ್ನಾದಲ್ಲಿ ವಜ್ರಗಳು ಪತ್ತೆ

ಮಧ್ಯಪ್ರದೇಶದ ಪನ್ನಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಗಳು ಪತ್ತೆಯಾಗಿದ್ದು, ಅವುಗಳನ್ನ ಹರಾಜು ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

Diamonds
Diamonds

By

Published : Jul 21, 2022, 9:17 PM IST

ಪನ್ನಾ(ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿವೆ. ಇದರ ಮಧ್ಯೆ ಕೂಡ ಪನ್ನಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಗಳು ಸಿಕ್ಕಿವೆ. ಅವುಗಳನ್ನ ಹರಾಜು ಹಾಕಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಮಧ್ಯಪ್ರದೇಶದ ಪನ್ನಾದಲ್ಲಿ ಈ ಹಿಂದಿನಿಂದಲೂ ಹೇರಳವಾಗಿ ವಜ್ರದ ಹರಳುಗಳು ಸಿಗುತ್ತಿರುತ್ತವೆ. ಚುನಾವಣೆ ಸಂದರ್ಭದಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ಹರಳುಗಳು ಪತ್ತೆಯಾಗಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ 21.60 ಕ್ಯಾರೆಟ್‌ನ 6 ವಜ್ರಗಳು ಸಿಕ್ಕಿದ್ದು, ಇವುಗಳ ಅಂದಾಜು ಬೆಲೆ 56 ಲಕ್ಷ 98 ಸಾವಿರದ 640 ರೂ ಎನ್ನಲಾಗಿದೆ.

ಜೂನ್‌ನಲ್ಲಿ 12 ವಜ್ರಗಳನ್ನು ವಜ್ರ ಸಿಕ್ಕಿದ್ದು,ಇದರಲ್ಲಿ 9 ಬ್ರೈಟ್, 2 ನೊಸ್ ಮತ್ತು 1 ನೋಸ್ ಹಾಲೊಡಕು ಬಣ್ಣದ ವಜ್ರ ಆಗಿದೆ. ಈ ವಜ್ರಗಳ ತೂಕ 44.39 ಕ್ಯಾರೆಟ್ ಆಗಿದ್ದು, ಇದರ ಅಂದಾಜು ಮೌಲ್ಯ 6 ಕೋಟಿ 73 ಲಕ್ಷ 7 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ:24 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡಿದ ಸುಪ್ರೀಂ..'ಸುರಕ್ಷತೆಯ ಅಂಶ' ಅಧ್ಯಯನಕ್ಕೆ AIIMSಗೆ ನಿರ್ದೇಶನ

ಮಧ್ಯಪ್ರದೇಶದಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿರುವ ಕಾರಣ ಹರಾಜು ಪ್ರಕ್ರಿಯೆ ನಡೆದಿಲ್ಲ. ಮುಂದಿನ ಕೆಲ ದಿನಗಳಲ್ಲಿ ಇದರ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details