ದುರ್ಗ್/ಭಿಲಾಯ್:ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಧೌರ್ ಗ್ರಾಮದಲ್ಲಿ ಗ್ರಾಮದ ಸರ್ಪಂಚ್ ಸೇರಿ 170 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಗ್ರಾಮವನ್ನು ಕಂಟೇನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಹಳ್ಳಿಗೆ ಹೊರಗಿನವರ ಪ್ರವೇಶ ನಿರಾಕರಿಸಲಾಗಿದೆ. ಮತ್ತೆ ಈ ಊರಿನ ಗ್ರಾಮಸ್ಥರು ಯಾರೂ ಹೊರಗೆ ಹೋಗದಂತೆ ಆದೇಶಿಸಲಾಗಿದೆ.
ಸರ್ಪಂಚ್ ಸೇರಿ ಒಂದೇ ಗ್ರಾಮದ 170 ಮಂದಿಗೆ ಕೊರೊನಾ: ಊರಿಗೆ ಊರೇ ಈಗ ಕಂಟೇನ್ಮೆಂಟ್ ಝೋನ್ - ಧೌರ್ ಗ್ರಾಮದಲ್ಲಿ ಕೊರೊನಾ
ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಧೌರ್ ಗ್ರಾಮದಲ್ಲಿ 170 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಗ್ರಾಮವನ್ನೇ ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ.
![ಸರ್ಪಂಚ್ ಸೇರಿ ಒಂದೇ ಗ್ರಾಮದ 170 ಮಂದಿಗೆ ಕೊರೊನಾ: ಊರಿಗೆ ಊರೇ ಈಗ ಕಂಟೇನ್ಮೆಂಟ್ ಝೋನ್ Containment Zone in Chhattisgarh](https://etvbharatimages.akamaized.net/etvbharat/prod-images/768-512-11198548-thumbnail-3x2-surya.jpg)
1500 ಕುಟುಂಬಗಳನ್ನು ಹೊಂದಿರುವ ಈ ಗ್ರಾಮದ ಜನಸಂಖ್ಯೆ ಸುಮಾರು 4,500. ಈಗಾಗಲೇ ಆರೋಗ್ಯ ಇಲಾಖೆ 3 ಸಾವಿರ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ 170 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಗ್ರಾಮದ ಸರ್ಪಂಚ್ಗೂ ಕೂಡ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೆಲವು ದಿನಗಳ ಹಿಂದಷ್ಟೇ ಊರಿನಲ್ಲಿ ಜಾತ್ರೆ ನಡೆದಿತ್ತು. ಈ ವೇಳೆ, ನೂರಾರು ಮಂದಿ ಜಾತ್ರೆಗೆ ಎಂದು ಒಂದೆಡೆ ಸೇರಿದ್ದರು. ಮತ್ತೊಂದು ಕಡೆ ರಾಜಧಾನಿ ರಾಯ್ಪುರದಲ್ಲಿ ನಿತ್ಯ ನೂರಾರು ಜನ ಹೋಗಿ ಬಂದಿರುವುದರಿಂದ ಸೋಂಕು ವ್ಯಾಪಿಸುವ ಆತಂಕ ಹೆಚ್ಚಿದ್ದು, ಜಿಲ್ಲಾಡಳಿತ ಅಗತ್ಯ ಮುನ್ನಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ. ಇಡೀ ಗ್ರಾಮವನ್ನು ಕಂಟೇನ್‌ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಹಳ್ಳಿಗೆ ಬಂದು ಹೋದ ಎಲ್ಲ ಜನರನ್ನು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.