ಚೆನ್ನೈ :ಕೊರೊನಾ ವೈರಸ್ ಸಮಯದಲ್ಲಿ ತಮ್ಮ ಜೀವನ ಮುಡುಪಾಗಿಟ್ಟು ಇತರರ ಪ್ರಾಣ ಉಳಿಸಿರುವ ವೈದ್ಯರು ಹಾಗೂ ದಾದಿಯರು ನಿಜವಾದ ಹೀರೋಗಳು. ಅವರ ಕಠಿಣ ಪರಿಶ್ರಮದಿಂದ ನಾವು ಸುರಕ್ಷಿತ ಹಾಗೂ ಆರೋಗ್ಯವಾಗಿದ್ದೇವೆ ಎಂದು ಎಂ ಎಸ್ ಧೋನಿ ತಿಳಿಸಿದ್ದಾರೆ.
ವೈದ್ಯಕೀಯ ಭ್ರಾತೃತ್ವ ಗುರುತಿಸುವ ಉದ್ದೇಶದಿಂದ ಶುಕ್ರವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಧೋನಿ, ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರ ಕಠಿಣ ಪರಿಶ್ರಮದಿಂದ ನಾವು ಸುರಕ್ಷಿತವಾಗಿದ್ದೇವೆ ಎಂದರು.
ನೀವು ನನ್ನನ್ನು ಥಾಲಾ ಎಂದು ಕರೆಯುವಾಗಲೆಲ್ಲಾ ನಾನು ನಿಜವಾದ ಹೀರೋ ಎಂದು ಅನಿಸುತ್ತದೆ. ಆದರೆ, ನಮ್ಮ ನಿಜವಾದ ಹೀರೋಗಳು ವೈದ್ಯರು ಮತ್ತು ದಾದಿಯರು. ಪ್ರತಿದಿನ ಅವರು ನೂರಾರು ಜೀವಗಳನ್ನ ಉಳಿಸುತ್ತಾರೆ. ಅವರ ತ್ಯಾಗ ಮತ್ತು ಶ್ರಮವೇ ನಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿಸಿದೆ.