ಹರಿದ್ವಾರ(ಉತ್ತರಾಖಂಡ): ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಅವರ ನೇತೃತ್ವದಲ್ಲಿ ಮೂರು ದಿನಗಳ 'ಧರ್ಮ ಸಂಸದ್' ಶುಕ್ರವಾರ ಉದ್ಘಾಟನೆಗೊಂಡಿದೆ.
ಈ ಧಾರ್ಮಿಕ ಸಂಸತ್ತಿನಲ್ಲಿ ನೂರಾರು ಸಂತರು ಮತ್ತು ಸಾಮಾನ್ಯ ಜನರು ಭಾಗವಹಿಸುತ್ತಿದ್ದಾರೆ. ಮೂರನೇ ದಿನ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ಧರ್ಮ ಸಂಸದ್ ನೀಡುತ್ತದೆ. ಮೊದಲ ದಿನ ಮಾತನಾಡಿದ ಸ್ವಾಮಿ ಯತಿ ನರಸಿಂಹಾನಂದ ಗಿರಿ, 2029ರ ವೇಳೆಗೆ ಭಾರತದಲ್ಲಿ ಹಿಂದೂಗಳಲ್ಲದವರು ಪ್ರಧಾನ ಮಂತ್ರಿಗಳಾಗುತ್ತಾರೆ. ಇದನ್ನು ತಪ್ಪಿಸಲು ಹಿಂದೂ ಧರ್ಮದ ರಕ್ಷಣೆಗೆ ಏನು ಮಾಡಬೇಕು ಎಂಬುದನ್ನು ಪರಿಗಣಿಸಲು 'ಧರ್ಮ ಸಂಸದ್' ಅನ್ನು ಆಯೋಜಿಸಲಾಗಿದೆ ಎಂದರು.