ಧಾರ್(ಮಧ್ಯಪ್ರದೇಶ): ಇಬ್ಬರು ಯುವತಿಯರು ತಮ್ಮ ತಾಯಿಯ ಚಿಕ್ಕಪ್ಪನ ಮಗನೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆಂದು ಆರೋಪಿಸಿ ಅವರಿಗೆ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ಸಂಬಂಧಿಕರು ಯುವತಿಯರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಡೆಯಬೇಡಿ ಎಂದು ಯುವತಿಯರು ಅಂಗಲಾಚಿದ್ರೂ, ಕರುಣೆ ತೋರದ ಕಟುಕರು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದ ಜನರು ಯಾರೂ ಕೂಡ ಸಹಾಯಕ್ಕೆ ಬಾರದಿರುವುದು ವಿಪರ್ಯಾಸ.