ಭೋಪಾಲ್(ಮಧ್ಯಪ್ರದೇಶ):ಭಾರತೀಯ ಪರಂಪರೆಯಲ್ಲಿ ತುಂಬಾ ಅದ್ಧೂರಿಯಾಗಿ ವಿವಾಹಗಳನ್ನು ನಡೆಸಿಕೊಂಡು ಬರುವುದು ರೂಢಿಯಲ್ಲಿದೆ. ಮಧ್ಯಮಾದಾಯದ ಕುಟುಂಬಗಳೂ ಕೂಡಾ ಅದ್ಧೂರಿ ವಿವಾಹಗಳತ್ತ ಒಲವು ತೋರುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಜೋಡಿ ಅತ್ಯಂತ ಸರಳ ವಿವಾಹವಾಗಿ ಗಮನ ಸೆಳೆದರು.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಗರ ಮ್ಯಾಜಿಸ್ಟ್ರೇಟ್ ಶಿವಾಂಗಿ ಜೋಷಿ ಮತ್ತು ಭಾರತೀಯ ಸೇನೆಯ ಮೇಜರ್ ಅನಿಕೇತ್ ಚತುರ್ವೇದಿ ಅವರ ವಿವಾಹ ತುಂಬಾ ಸರಳವಾಗಿ ನಡೆದಿದೆ. ಕೇವಲ ಐದು ನೂರು ರೂಪಾಯಿಗಳಲ್ಲಿ ಮದುವೆಯ ಕಾರ್ಯ ಪೂರ್ಣಗೊಂಡಿದೆ.
ಮ್ಯಾಜಿಸ್ಟ್ರೇಟ್ ಶಿವಾಂಗಿ ಜೋಷಿ ಮತ್ತು ಭಾರತೀಯ ಸೇನೆಯ ಮೇಜರ್ ಅನಿಕೇತ್ ಚತುರ್ವೇದಿ ವಿವಾಹ ಸಂಬಂಧಿಗಳನ್ನು ಮತ್ತು ಹೆಚ್ಚು ಮಂದಿ ಗೆಳೆಯರನ್ನು ಆಹ್ವಾನಿಸದೇ ವಿವಾಹ ನಡೆಸಲಾಗಿದೆ. ಎರಡೂ ಕುಟುಂಬಗಳಿಂದ ಕೇವಲ ಐದರಿಂದ 10 ಮಂದಿ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಈ ಇಬ್ಬರ ಸರಳತೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯಕ್ಕೆ ಮೇಜರ್ ಅನಿಕೇತ್ ಚತುರ್ವೇದಿ ಲಡಾಖ್ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ನವದಂಪತಿ ಮೂಲತಃ ಭೋಪಾಲ್ಗೆ ಸೇರಿದವರಾಗಿದ್ದಾರೆ. ಇವರ ಮದುವೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ಕಷ್ಟದ ದಿನಗಳನ್ನು ತಂದವರು ಯಾರು ಎಂದು ದೇಶಕ್ಕೆ ಗೊತ್ತು: ರಾಹುಲ್ ಗಾಂಧಿ