ಕೋಲ್ಕತಾ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಭವಾನಿಪುರದ ನೂತನ ಚುನಾಯಿತ ಶಾಸಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಅಕ್ಟೋಬರ್ 7, 2021 ರಂದು ಬೆಳಿಗ್ಗೆ 11.45 ರಂದು ಅಸೆಂಬ್ಲಿಯಲ್ಲಿ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಹೊಸದಾಗಿ ಆಯ್ಕೆಯಾದ ಇಬ್ಬರು ತೃಣಮೂಲ ಕಾಂಗ್ರೆಸ್ ಶಾಸಕರಾದ ಜಂಗೀಪುರದಿಂದ ಜಾಕೀರ್ ಹುಸೇನ್ ಮತ್ತು ಸಂಸೆರ್‌ಗುಂಜ್‌ನ ಅಮಿರುಲ್ ಇಸ್ಲಾಂ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಭವಾನಿಪುರದ ಉಪಚುನಾವಣೆ ಮತ್ತು ಜಂಗೀಪುರ ಮತ್ತು ಸಂಸರ್‌ಗ್ಂಜ್‌ನ ಚುನಾವಣೆಯ ಫಲಿತಾಂಶಗಳನ್ನು ಅಕ್ಟೋಬರ್ 3, 2021 ರಂದು ಘೋಷಿಸಲಾಯಿತು. ಅದರ ನಂತರ ಮುಖ್ಯಮಂತ್ರಿಯವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ತೊಡಕುಗಳು ಉಂಟಾಗಿದ್ದವು. ಮುಖ್ಯವಾಗಿ ಕಾರ್ಯಕ್ರಮದ ದಿನಾಂಕ ಸಂಬಂಧ ಗೊಂದಲ ಉಂಟಾಗಿತ್ತು.
ದೀದಿ ಮನವಿಗೆ ಒಕೆ ಎಂದ ಗರ್ವನರ್
ಆದರೆ, ಮಂಗಳವಾರ ತಡರಾತ್ರಿ ರಾಜ್ಯಪಾಲರು ಗೊಂದಲವನ್ನು ಪರಿಹರಿಸಿದ್ದರು. ಮುಖ್ಯಮಂತ್ರಿಯವರು ಗುರುವಾರ ಪ್ರಮಾಣವಚನ ಬೋಧಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು. ರಾಜ್ಯಪಾಲರು ಅದಕ್ಕೆ ಒಪ್ಪಿದ್ದಾರೆ. ಆದ್ದರಿಂದ ಗುರುವಾರ, ಅಂದರೆ ಮಹಾಲಯ ಅಮವಾಸ್ಯೆಯ ಒಂದು ದಿನದ ನಂತರ, ರಾಜ್ಯಪಾಲರು ಮಮತಾ ಬ್ಯಾನರ್ಜಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.