ಧನ್ಬಾದ್(ಜಾರ್ಖಂಡ್):ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 6 & 7 ರ ರೈಲ್ವೆ ಟ್ರ್ಯಾಕ್ ಮೇಲೆ ನಿಂತಿದ್ದ ಬಾಲಕಿಯೊಬ್ಬಳನ್ನು ಆರ್ಪಿಎಫ್ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬಾಲಕಿ ರೈಲ್ವೆ ಟ್ರ್ಯಾಕ್ ಮೇಲೆ ನಿಂತಿದ್ದಳು.
ರೈಲ್ವೆ ಟ್ರ್ಯಾಕ್ ಮೇಲೆ ನಿಂತಿದ್ದ ಬಾಲಕಿ ರಕ್ಷಣೆ ಈ ವೇಳೆ ಅನೇಕರು ಸ್ಥಳದಲ್ಲಿದ್ದರೂ, ಆಕೆಯನ್ನು ರಕ್ಷಿಸಲು ಯಾರೂ ಕೂಡ ಮುಂದಾಗಲಿಲ್ಲ. ಈ ಹೊತ್ತಿಗೆ ರೈಲು ಹತ್ತಿರಕ್ಕೆ ಬರುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್ಪಿಎಫ್ ಪೊಲೀಸ್ ಓಡಿ ಹೋಗಿ ಬಾಲಕಿ ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಕಾರಣ ಕೇಳಿದಾಗ ಆಕೆ ಕಣ್ಣೀರು ಹಾಕಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮೋದಿ ಪ.ಬಂಗಾಳ ಚುನಾವಣಾ ರ‍್ಯಾಲಿ ರದ್ದು: ಕೋವಿಡ್ ಕುರಿತು ಉನ್ನತ ಮಟ್ಟದ ಸಭೆ!
ರೈಲ್ವೆ ಟ್ರ್ಯಾಕ್ ಮೇಲೆ 01448 ಹೌರಾ - ಜಬಲ್ಪುರ್ ಶಕ್ತಿಪುಂಜ್ ಎಕ್ಸ್ಪ್ರೆಸ್ ಬರುತ್ತಿತ್ತು. ಈ ವೇಳೆ, ಅನೇಕ ಪ್ರಯಾಣಿಕರು ಅಲ್ಲಿ ನಿಂತಿದ್ದರು. ಬಾಲಕಿ ರೈಲ್ವೆ ಟ್ರ್ಯಾಕ್ ಮೇಲೆ ನಿಂತಿರುವುದನ್ನ ನೋಡಿದ್ರೂ ಆಕೆಯ ಸಹಾಯಕ್ಕೆ ಧಾವಿಸಿಲ್ಲ. ಕೆಲವರು ಬಚಾವೋ ಬಚಾವೋ ಎಂದು ಕೂಗಿದ್ದಾರೆ. ಶಬ್ದ ಕೇಳಿದ ತಕ್ಷಣವೇ ಆರ್ಪಿಎಫ್ ಜವಾನ್ ಪ್ರಭಾಸ್ ಕುಮಾರ್ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬು ಪ್ರಶ್ನೆ ಮಾಡಿದಾಗ ಬಾಲಕಿ ತುಂಬಾ ಸಮಯದವರೆಗೆ ಕಣ್ಣೀರು ಹಾಕಿರುವುದಾಗಿ ತಿಳಿದು ಬಂದಿದೆ.