ಕರ್ನಾಟಕ

karnataka

ETV Bharat / bharat

ಇಂಡಿಗೋ, ಸ್ಪೈಸ್​ ಜೆಟ್​ ಬೆನ್ನಲ್ಲೇ ಇದೀಗ ಏರ್​ ವಿಸ್ತಾರಾಗೂ 10 ಲಕ್ಷ ರೂ ದಂಡ ವಿಧಿಸಿದ ಡಿಜಿಸಿಎ

ಪ್ರಯಾಣಿಕರ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್​ ವಿಸ್ತಾರಾಗೆ ಡಿಜಿಸಿಎ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

DGCA imposes a fine to Air Vistara
DGCA imposes a fine to Air Vistara

By

Published : Jun 2, 2022, 2:26 PM IST

ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಇಂಡಿಗೋ ಹಾಗೂ ಸ್ಪೈಸ್​ಜೆಟ್​ ಏರ್​ಲೈನ್ಸ್​ಗೆ ದಂಡ ವಿಧಿಸಿದ್ದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಇದೀಗ ಏರ್​ ವಿಸ್ತಾರಾಗೂ 10 ಲಕ್ಷ ರೂಪಾಯಿ ದಂಡ ಹಾಕಿದೆ. ಪ್ರಯಾಣಿಕರ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಮಧ್ಯಪ್ರದೇಶದ ಇಂದೋರ್​​ ವಿಮಾನ ನಿಲ್ದಾಣದಲ್ಲಿ ತರಬೇತಿ ಇಲ್ಲದ ಪೈಲಟ್​​ನಿಂದ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದಕ್ಕಾಗಿ ಈ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಜಿಸಿಎ ನೀಡಿರುವ ಟೇಕಾಫ್​ ಮತ್ತು ಲ್ಯಾಂಡಿಂಗ್​ ಕ್ಲಿಯರೆನ್ಸ್​ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್​ಲೈನ್ಸ್​ ಕಂಪನಿಗೆ ದಂಡ ಹಾಕಲಾಗಿದೆ. ಏರ್​​ಲೈನ್ಸ್​ ಕಂಪನಿ ತೆಗೆದುಕೊಂಡಿರುವ ನಿಯಮದಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಇದೊಂದು ಗಂಭೀರ ನಿಯಮ ಉಲ್ಲಂಘನೆ ಅಪರಾಧವಾಗಿದೆ ಎಂದಿದೆ. ಸಿಮ್ಯುಲೇಟರ್​​ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್​​ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಸಿಮ್ಯುಲೇಟರ್​​ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಮೇ 30ರಂದು ಈ ಘಟನೆ ನಡೆದಿದೆ.

ಇದನ್ನೂ ಓದಿ:ಕಮಲದೊಂದಿಗೆ ಹೊಸ ಅಧ್ಯಾಯ ಆರಂಭಿಸಿದ ಹಾರ್ದಿಕ್​.. ಕೈ ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆಂದ ಯುವ ನಾಯಕ

ಕಳೆದ ಮೇ 7ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ದಿವ್ಯಾಂಗ ಮಗುವಿಗೆ ಬೋರ್ಡಿಂಗ್ ನಿರಾಕರಣೆ ಮಾಡಿದ್ದಕ್ಕಾಗಿ ಇಂಡಿಗೋ ಏರ್​ಲೈನ್ಸ್​ಗೆ 5 ಲಕ್ಷ ರೂ. ದಂಡ ಹಾಗೂ ಪೈಲಟ್​​​ಗಳಿಗೆ ದೋಷಯುಕ್ತ ಸಿಮ್ಯುಲೇಟರ್ ಬಳಸಿದ ಕಾರಣ ಸ್ಪೈಸ್​ ಜೆಟ್​ಗೆ 10 ಲಕ್ಷ ರೂ ದಂಡ ವಿಧಿಸಲಾಗಿತ್ತು.

ABOUT THE AUTHOR

...view details