ಹೈದರಾಬಾದ್ :ದೇಶದಲ್ಲಿ ಕೊರೊನಾ 2ನೇ ಅಲೆ ಉತ್ತುಂಗದಲ್ಲಿದ್ದಾಗ ಸಾವನ್ನಪ್ಪಿದ ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲಿ ಬಂದ ಬಗ್ಗೆ ವರದಿಯಾಗಿದ್ದವು. ಹೀಗೆ ನದಿಯಲ್ಲಿ ತೇಲಿ ಬಂದ ಹೆಣಗಳು 300ಕ್ಕೂ ಅಧಿಕ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಗಂಗಾ ನದಿ ಅಭಿವೃದ್ಧಿ ಯೋಜನೆಯ ಅಧಿಕಾರಿ ರಾಜೀವ್ ರಂಜನ್ ಮಿಶ್ರಾ ಮತ್ತು ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿ ಪುಸ್ಕಲ್ ಉಪಾಧ್ಯಾಯ ಅವರು ಬರೆದ ಗಂಗಾ : ರೀಇಮೇಜಿನಿಂಗ್, ರಿಜುವೆನೇಟಿಂಗ್, ರೀಕನೆಕ್ಟಿಂಗ್ ಪುಸ್ತಕದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
ಪುಸ್ತಕದ ಅಧ್ಯಾಯವೊಂದರಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿ ಬಂದ ಬಗ್ಗೆ ಉಲ್ಲೇಖವಾಗಿದೆ. ಉತ್ತರಪ್ರದೇಶ ಮತ್ತು ಬಿಹಾರದ ನದಿಯ ಘಟ್ಟ ಪ್ರದೇಶದಲ್ಲಿ ಕೋವಿಡ್ ಶವಗಳನ್ನು ಬಿಸಾಡಿದ್ದರು. ಆಯಾ ರಾಜ್ಯಗಳ ಗಂಗಾನದಿಯ ಉದ್ದಕ್ಕೂ ಶವಗಳು ತೇಲಿ ಬಂದಿವೆ. ಶವಗಳ ಅಂತ್ಯಕ್ರಿಯೆಗೆ ತಗುಲುವ ಅಧಿಕ ವೆಚ್ಚ ಮತ್ತು ಬಡತನ ಈ ರೀತಿ ಮಾಡಲು ಜನರನ್ನು ಪ್ರೇರೇಪಿಸಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.