ದೇವಾಸ್(ಮಧ್ಯಪ್ರದೇಶ):ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತಿದೆ. ಸಾಧು ಪ್ರಾಣಿಯಾಗಿರುವ ಮೇಕೆ ಸಾಮಾನ್ಯವಾಗಿ ಸೊಪ್ಪು, ಕಾಳು, ತರಕಾರಿ, ಮರದ ಎಲೆ ತಿನ್ನುವುದು ಸಾಮಾನ್ಯ. ಆದರೆ, ಇಲ್ಲೊಂದು ಮೇಕೆಗೆ ಪ್ರತಿದಿನ ಸೊಪ್ಪಿನ ಬದಲು ಚಿಕನ್ ಬಿರಿಯಾನಿ ಬೇಕು. ಈ ಸುದ್ದಿ ನೋಡಿ ನಿಮಗೂ ಕೂಡ ಆಶ್ಚರ್ಯ ಆಗಬಹುದು.
ಮೇಕೆಗೆ ಆಹಾರವಾಗಿ ಬೇಕು ಚಿಕನ್ ಬಿರಿಯಾನಿ ಹೌದು, ಮಧ್ಯಪ್ರದೇಶದ ದೇವಾಸ್ನ ಲೋಹರಿ ಗ್ರಾಮದಲ್ಲಿನ ಮೇಕೆವೊಂದು ವಿಭಿನ್ನ ವಿಚಾರಕ್ಕಾಗಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿದಿನ ಇದಕ್ಕೆ ತಿನ್ನುವುದಕ್ಕೆ ಮರದ ಕೊಂಬೆ, ಸೊಪ್ಪಿನ ಬದಲಾಗಿ ಚಿಕನ್ ಬಿರಿಯಾನಿ ಬೇಕು. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ದೂರದ ಊರಿನಿಂದ ಜನರು ಈ ವಿಚಿತ್ರ ಪ್ರಾಣಿಯನ್ನ ನೋಡಲು ಬರುತ್ತಿದ್ದಾರೆ.
ಚಿಕನ್ ಬಿರಿಯಾನಿ ಸೇವಿಸುವ ಮೇಕೆ ದೇವಾಸ್ನ ಜಿಲ್ಲಾಸ್ಪತ್ರೆ ಪಕ್ಕದ ಲೋಹರಿ ಗ್ರಾಮದ ರೈತ ರಫೀಕ್ ತಮ್ಮ ಜಮೀನಿನಲ್ಲಿ ಹಸು, ಎಮ್ಮೆ, ಮೇಕೆ ಸಾಕಿದ್ದಾರೆ. ಇದರಲ್ಲಿ ಮೇಕೆವೊಂದಿದ್ದು, ಅದು ಸೊಪ್ಪು, ತರಕಾರಿ, ಮರದ ಎಲೆಗಳ ಬದಲಾಗಿ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಮೀನು, ಮೊಟ್ಟೆ ಮುಂತಾದ ಆಹಾರ ಸೇವನೆ ಮಾಡುತ್ತದೆ.
ಪ್ರತಿದಿನ ಈ ಮೇಕೆಗೆ ಬೇಕೇ ಬೇಕು ಚಿಕನ್ ಬಿರಿಯಾನಿ ಇದನ್ನೂ ಓದಿರಿ:ಅಪ್ರಾಪ್ತೆ ಮೇಲೆ 10ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ.. ಕಲಬುರಗಿ ಬಾಲಕನ ಬಂಧನ
ಕಳೆದ ಮೂರು ವರ್ಷಗಳಿಂದ ಮೇಕೆ ಮಾಂಸಹಾರ ಸೇವನೆ ಮಾಡಲು ಆರಂಭಿಸಿದ್ದು, ಪ್ರತಿದಿನ ಚಿಕನ್ ಬಿರಿಯಾನಿ ನೀಡಲು ಶುರು ಮಾಡಿದ್ದಾಗಿ ರಫೀಕ್ ತಿಳಿಸಿದ್ದಾರೆ. ಮೇಕೆ ಚಿಕನ್ ಬಿರಿಯಾನಿ ಸೇವನೆ ಮಾಡುತ್ತಾ ಇಲ್ಲವೋ ಎಂಬುದನ್ನ ಚೆಕ್ ಮಾಡಲು 'ಈಟಿವಿ ಭಾರತ' ತಂಡ ಸ್ಥಳಕ್ಕೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದ್ದು, ಮೇಕೆ ಮಾಂಸಹಾರ ಸೇವನೆ ಮಾಡಿದೆ ಎಂಬುದು ಖಚಿತವಾಗಿದೆ.