ಕರ್ನಾಟಕ

karnataka

ETV Bharat / bharat

11 ಭಕ್ತರಿಗೆ ವಿದ್ಯುತ್ ಶಾಕ್: ಗಣೇಶ ಮೂರ್ತಿ ನಿಮಜ್ಜನ ವೇಳೆ ಅವಘಡ - Etv bharat kannada

ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ 11 ಭಕ್ತರಿಗೆ ವಿದ್ಯುತ್ ಶಾಕ್​ ತಗಲಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

devotees were electrocuted
devotees were electrocuted

By

Published : Sep 10, 2022, 10:11 AM IST

ನವೀ ಮುಂಬೈ:ದೇಶಾದ್ಯಂತ ನಿನ್ನೆ ರಾತ್ರಿ ಸಡಗರ-ಸಂಭ್ರಮದಿಂದ ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ನಡೆದಿದೆ. ಈ ವೇಳೆ ಕೆಲವೊಂದು ರಾಜ್ಯಗಳಲ್ಲಿ ಅಹಿತಕರ ಘಟನೆ ಸಹ ನಡೆದಿರುವುದು ವರದಿಯಾಗಿದೆ. ನವೀ ಮುಂಬೈನ ಪನ್ವೇಲ್​​​ನಲ್ಲಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಜನರೇಟರ್ ತಂತಿ ತುಂಡಾಗಿ 11 ಭಕ್ತರಿಗೆ ವಿದ್ಯುತ್​ ಶಾಕ್​ ಹೊಡೆದಿದೆ.

ತೀವ್ರ ವಿದ್ಯುತ್​​ ಸ್ಪರ್ಶಕ್ಕೊಳಗಾಗಿರುವ ಇವರೆಲ್ಲರನ್ನೂ ಆರಂಭದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರಲ್ಲಿ ಕೆಲವರ ಸ್ಥಿತಿ ತೀರಾ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಪಟವರ್ಧನ್​​ ಹಾಗೂ ಲೈಫ್​ಲೈನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು

ನಿನ್ನೆ ಸಂಜೆ 7:30ರ ವೇಳೆ ಈ ಘಟನೆ ಸಂಭವಿಸಿದೆ. ವಿದ್ಯುತ್​ ಶಾಕ್​​​​ಗೊಳಗಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮನೆಯಲ್ಲಿ ಸ್ಥಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯ ನಿಮಜ್ಜನ ಮಾಡಲು ಎಲ್ಲರೂ ಒಟ್ಟಿಗೆ ತೆರಳುತ್ತಿದ್ದರು. ಈ ವೇಳೆ ವಡ್ಘರ್​ ನದಿ ಪಕ್ಕದಲ್ಲಿ ತುಂಡಾದ ಜನರೇಟರ್​ ತಂತಿ ಇವರ ಮೇಲೆ ಬಿದ್ದಿದೆ. ಹೀಗಾಗಿ, ಎಲ್ಲರೂ ಗಾಯಗೊಂಡಿದ್ದಾರೆ. ಈಗಾಗಲೇ ಇಬ್ಬರು ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ.

ಇನ್ನೂ ಹರಿಯಾಣದ ವಿವಿಧ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ 7 ಜನರು ದುರ್ಮರಣಕ್ಕೀಡಾಗಿರುವ ಘಟನೆ ಸಹ ನಡೆದಿದೆ.

ABOUT THE AUTHOR

...view details