ಕರ್ನಾಟಕ

karnataka

ETV Bharat / bharat

ಕಾಶಿ ವಿಶ್ವನಾಥನ ಪಲ್ಲಕ್ಕಿ ಅದ್ದೂರಿ ಮೆರವಣಿಗೆ.. 356 ವರ್ಷಗಳ ಸಂಪ್ರದಾಯವಿದು - ಈಟಿವಿ ಭಾರತ ಕನ್ನಡ

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

ಕಾಶಿ ವಿಶ್ವನಾಥನ ಪಲ್ಲಕ್ಕಿ ಮೆರವಣಿಗೆ: 356 ವರ್ಷಗಳಿಂದ ನಡೆದು ಬರುತ್ತಿದೆ ಸಂಪ್ರದಾಯ
Devotees throng thoroughfares to witness Lord Vishwanath's procession in Kashi

By

Published : Aug 12, 2022, 10:59 AM IST

ವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಕಾಶಿ ವಿಶ್ವನಾಥ ದೇಗುಲದಲ್ಲಿ ಕಳೆದ 356 ವರ್ಷಗಳಿಂದ ಈ ಧಾರ್ಮಿಕ ಆಚರಣೆಯನ್ನು ಅನುಸರಿಸಲಾಗುತ್ತಿದೆ.

ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಬೆಳ್ಳಿಯ ಪ್ರತಿಕೃತಿಯು ವಾರಾಣಸಿ ನಗರದ ಪ್ರಮುಖ ರಸ್ತೆಗಳು ಮತ್ತು ಪಥಗಳಲ್ಲಿ ಸಂಚರಿಸಿದ ನಂತರ ಗುರುವಾರ ಕಾಶಿಧಾಮ ದೇವಾಲಯದ ಆವರಣಕ್ಕೆ ಆಗಮಿಸಿತು. ವಿಶ್ವನಾಥನ ದರ್ಶನ ಪಡೆಯಲು ಯಾತ್ರೆಯ ಮಾರ್ಗದ ಉದ್ದಕ್ಕೂ ನೂರಾರು ಭಕ್ತರು ನೆರೆದಿದ್ದರು. ರಂಗಭಾರಿ ಏಕಾದಶಿಯ ಶುಭ ಸಂದರ್ಭದಲ್ಲಿ ಭಕ್ತರು ದೇವರ ದರ್ಶನ ಪಡೆದರು.

ಮಾಜಿ ಮಹಂತ್ ಕುಲಪತಿ ತ್ರಿಪಾಠಿ ಮಾತನಾಡಿ, 75ನೇ ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಇಡೀ ದೇಶವು 'ಆಜಾದಿ ಕಾ ಅಮೃತ್ ಮಹೋತ್ಸವ' ಮತ್ತು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಮುಳುಗಿದೆ. ಕಾಶಿ ವಿಶ್ವನಾಥನ ಬೆಳ್ಳಿಯ ಪ್ರತಿಕೃತಿಯನ್ನು ನಮ್ಮ ತ್ರಿವರ್ಣ ಧ್ವಜದಂತೆಯೇ ಹೂವುಗಳು ಮತ್ತು ದಳಗಳಿಂದ ಅಲಂಕರಿಸಲಾಗಿದೆ. ಜೊತೆಗೆ, ದೇವರ ಧಾರ್ಮಿಕ ಮೆರವಣಿಗೆಗಾಗಿ ಹೊರತೆಗೆಯಲಾದ ಪಲ್ಲಕ್ಕಿಯನ್ನು ನಮ್ಮ ರಾಷ್ಟ್ರಧ್ವಜದಂತೆಯೇ ಬಣ್ಣ ಸಂಯೋಜನೆಯಲ್ಲಿ ಅಲಂಕರಿಸಲಾಗಿತ್ತು ಎಂದು ಹೇಳಿದರು.

ಇದನ್ನು ಓದಿ:ಭಾರತ-ಪಾಕ್ ಗಡಿಯಲ್ಲಿ ರಕ್ಷಾ ಬಂಧನ ಸಂಭ್ರಮ: ಸೈನಿಕರಿಗೆ ರಾಖಿ ಕಟ್ಟಿದ ಮಹಿಳೆಯರು

ABOUT THE AUTHOR

...view details