ಹರಿದ್ವಾರ (ಉತ್ತರಾಖಂಡ) : ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ಪ್ರಯುಕ್ತ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ಕುಂಭಮೇಳದ ಪ್ರಯುಕ್ತ ಹರಿದ್ವಾರ ಘಟ್ಟಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಭಕ್ತರೊಬ್ಬರು ಹೇಳಿದರು.
ಓದಿ : ಚಮೋಲಿ ಹಿಮ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ.. ಸುರಂಗದಲ್ಲಿ ಡ್ರಿಲ್ಲಿಂಗ್ ಆಪರೇಶನ್
ಸಂಕ್ರಾಂತಿ ದಿನಕ್ಕಿಂತ, ಇಂದು ಹೆಚ್ಚಿನ ಜನಸಂದಣಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಭದ್ರತೆ ದೃಷ್ಟಿಯಿಂದ ನಾವು ಕುಂಭವನ್ನು ಆರು ಡಿವಿಷನ್ ಮತ್ತು 24 ಸೆಕ್ಟರ್ಗಳಾಗಿ ವಿಂಗಡಿಸಿದ್ದೇವೆ ಎಂದು ಕುಂಭ ಪೊಲೀಸ್ ಅಧೀಕ್ಷಕ (ಎಸ್ಪಿ) ಸುರ್ಜೀತ್ ಸಿಂಗ್ ಪನ್ವಾರ್ ತಿಳಿಸಿದರು.
'ಕುಂಭಮೇಳ' ಜನವರಿ 15 ರಂದು ಹರಿದ್ವಾರದಲ್ಲಿ ಪ್ರಾರಂಭವಾಗಿದ್ದು, ಏಪ್ರಿಲ್ 27 ರಂದು ಮುಕ್ತಾಯಗೊಳ್ಳಲಿದೆ. ಮೌನಿ ಅಮಾವಾಸ್ಯೆ ಹಿಂದೂ ಧರ್ಮದ ಪ್ರಕಾರ ಒಂದು ಶುಭ ದಿನ. ಇದು ಹಿಂದೂ ಕ್ಯಾಲೆಂಡರ್ ಮಾಘ ಮಾಸದಲ್ಲಿ ಬರುತ್ತದೆ. ಈ ದಿನ ಜನರು ಮೌನ್ ವೃತವನ್ನು ಆಚರಿಸುತ್ತಾರೆ.