ನವದೆಹಲಿ: ಕರ್ನಾಟಕದ ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ಬಸವಣ್ಣನ ವಿಗ್ರಹ ಹಾಲು ಕುಡಿದಿರುವ ಬಗ್ಗೆ ವರದಿಯಾಗಿದೆ. ಇದೇ ರೀತಿಯಾದ ವರದಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಆಗಿದ್ದು, ನೂರಾರು ಜನರು ಹಾಲು ಕುಡಿಯುವ ನಂದಿ ವಿಗ್ರಹ ನೋಡಲು ಧಾವಿಸಿ ಬರುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಕಲ್ಲಿನ ಬಸವನಿಗೆ ಹಾಲು ಕುಡಿಸಲು ಮುಗಿಬಿದ್ದ ಜನ.. ಕ್ಷೀರ ಸೇವಿಸಿದನಾ ಬಸವಣ್ಣ!?
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಅರಳಿಕಟ್ಟಿ ಬಸವಣ್ಣನ ಮೂರ್ತಿಯು ಹಾಲು ಕುಡಿಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇತ್ತ, ಕಲಬುರಗಿ ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ ಕಲ್ಲಿನ ಬಸವಣ್ಣನೂ ಹಾಲು ಕುಡಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿಯಲ್ಲೇ ದೆಹಲಿ ವಜೀರ್ಬಾದ್ನ ಶಿವನ ಮಂದಿರದಲ್ಲೂ ನಂದಿ ವಿಗ್ರಹ ಕೂಡ ಹಾಲು ಕುಡಿದಿಯುವ ವರದಿಯಾಗಿದೆ. ಇದನ್ನು 'ಪವಾಡ' ಎಂದೇ ಜನರು ಭಾವಿಸಿದ್ದು, ತಂಡೋಪತಂಡವಾಗಿ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ.