ಅಮೃತಸರ್(ಪಂಜಾಬ್) :ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಅನೇಕ ರೀತಿಯ ಭಿನ್ನ-ವಿಭಿನ್ನ ಆಚರಣೆಗಳಿವೆ. ಕೆಲವರು ತಮ್ಮಿಷ್ಟದ ದೇವರಿಗೆ ಸಸ್ಯಹಾರ ನೈವೇದ್ಯ ಮಾಡಿದ್ರೆ, ಕೆಲವರು ಮಾಂಸಾಹಾರ ನೈವೇದ್ಯ ಮಾಡ್ತಾರೆ. ಆದರೆ, ಪಂಜಾಬ್ನಲ್ಲಿರುವ ದೇವಾಲಯವೊಂದರಲ್ಲಿ ಮದ್ಯವೇ ನೈವೇದ್ಯ ಆಗಿದ್ದು, ಅಲ್ಲಿನ ಭಕ್ತರಿಗೆ ಅದುವೇ ತೀರ್ಥವಾಗಿದೆ.
ಪಂಜಾಬ್ನ ಅಮೃತಸರ ಜಿಲ್ಲೆಯ ಭೋಮಾ ಗ್ರಾಮದಲ್ಲಿರುವ ಬಾಬಾ ರೋಡೆ ಷಾ ದೇವಾಲಯದಲ್ಲಿ ಮದ್ಯವನ್ನ ನೈವೇದ್ಯ ರೂಪದಲ್ಲಿ ಅರ್ಪಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಜನರು ಅದನ್ನ ತೆಗೆದುಕೊಂಡು ಬಂದು ನೈವೇದ್ಯ ಮಾಡ್ತಾರೆ. ತದನಂತರ ಪ್ರಸಾದದ ರೂಪದಲ್ಲಿ ಅಲ್ಲಿನ ಭಕ್ತರಿಗೆ ಹಂಚಿಕೆ ಮಾಡಲಾಗ್ತದೆ. ಕಳೆದ 90 ವರ್ಷಗಳಿಂದಲೂ ಈ ಆಚರಣೆ ನಡೆದುಕೊಂಡು ಬಂದಿದ್ದು, ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ.