ಶಿರಡಿ (ಮಹಾರಾಷ್ಟ್ರ): ಪ್ರತಿ ವರ್ಷ ಎರಡೂವರೆ ಕೋಟಿಗೂ ಹೆಚ್ಚು ಭಕ್ತರು ಸಾಯಿಬಾಬಾ ದರ್ಶನ ಪಡೆಯಲು ಆಗಮಿಸುತ್ತಾರೆ. ದೀಪಾವಳಿ ಮತ್ತು ರಜಾ ದಿನಗಳಲ್ಲಿ ದಾಖಲೆಯ ಜನಸಂದಣಿ ಇರುತ್ತದೆ. ಈ ವರ್ಷ ಅಕ್ಟೋಬರ್ 20 ರಿಂದ ನವೆಂಬರ್ 5 ರವರೆಗೆ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಬಂದಿದ್ದಾರೆ.
ಈ ಹದಿನೈದು ದಿನಗಳಲ್ಲಿ ಭಕ್ತರು ಸಾಯಿಬಾಬಾಗೆ 17 ಕೋಟಿ 77 ಲಕ್ಷ 53 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಮಾಹಿತಿ ನೀಡಿದ್ದಾರೆ.