ಅಹಮದ್ನಗರ(ಮಹಾರಾಷ್ಟ್ರ):ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಕೇವಲ ಮೂರು ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಹರಿದು ಬಂದಿದೆ. ಗುರುಪೂರ್ಣಿಮೆ ಅಂಗವಾಗಿ ಹೇರಳವಾಗಿ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಬರೋಬ್ಬರಿ 5 ಕೋಟಿ 12 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಗುರು ಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿಬಾಬಾ ದೇಗುಲದಲ್ಲಿ ಮೂರು ದಿನಗಳ ಉತ್ಸವ ಆಚರಣೆ ಮಾಡಲಾಗಿದೆ. ಬರೋಬ್ಬರಿ ಮೂರು ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇವರಿಂದ ಒಟ್ಟು 5 ಕೋಟಿ12 ಲಕ್ಷದ 408 ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ 12 ವಿದೇಶಿ ದೇಶಗಳ 19 ಲಕ್ಷ 80 ಸಾವಿರದ 94 ರೂಪಾಯಿ ಸಹ ಸೇರಿದೆ.
ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಿರಲಿಲ್ಲ. ಇದೀಗ, ಕೋವಿಡ್ ಮೇಲಿನ ಎಲ್ಲ ನಿರ್ಬಂಧ ತೆಗೆದು ಹಾಕಿರುವ ಕಾರಣ ಹೆಚ್ಚಿನ ಭಕ್ತರು ಭೇಟಿ ನೀಡಲು ಶುರು ಮಾಡಿದ್ದಾರೆ. ದೇವಸ್ಥಾನಕ್ಕೆ ಹೆಚ್ಚಿನ ದೇಣಿಗೆ ಹರಿದು ಬರುತ್ತಿರುವ ಕಾರಣ ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಎರಡು ಆಸ್ಪತ್ರೆ ಸ್ಥಾಪಿಸಲಾಗಿದೆ. ಕರ್ನಾಟಕದ ಶಿರಸಿಯಲ್ಲಿ ಸಾಯಿ ಭಕ್ತರ ವಾಸ್ತವ್ಯಕ್ಕಾಗಿ ಭಕ್ತಿ ನಿವಾಸ ಸಹ ನಿರ್ಮಾಣಗೊಂಡಿದೆ.
ಇದನ್ನೂ ಓದಿರಿ:ಪಾರ್ಸಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರದ ಯತ್ನ: ಡೇಟಿಂಗ್, ವಿವಾಹ ಸಮಾಲೋಚನೆಗೆ ಒತ್ತು
ಏಷ್ಯಾದಲ್ಲೇ ಅತಿ ದೊಡ್ಡ ಸೌರಶಕ್ತಿ ಚಾಲಿತ ಪ್ರಸಾದ ನಿಲಯ ನಿರ್ಮಾಣ ಮಾಡಲಾಗಿದ್ದು, ನಿತ್ಯ 50 ಸಾವಿರ ಭಕ್ತರಿಗೆ ಉಚಿತವಾಗಿ ಅನ್ನ ಪ್ರಸಾದ ಮಾಡಲಾಗ್ತದೆ. ಪ್ರತಿ ವರ್ಷ ಸರ್ವಧರ್ಮೀಯ ಸಮುದಾಯ ವಿವಾಹ ಆಯೋಜನೆ ಮಾಡಲಾಗ್ತಿದ್ದು, ಕೇವಲ 1 ರೂಪಾಯಿ 25 ಪೈಸೆ ಪಡೆದುಕೊಳ್ಳಲಾಗುತ್ತದೆ.