ಕೂಚ್ ಬೆಹಾರ್:ಕಾರಿನ ಜನರೇಟರ್ನಿಂದ ಉಂಟಾದ ಶಾರ್ಟ್ಸರ್ಕ್ಯೂಟ್ನಿಂದಾಗಿ 10 ಭಕ್ತರು ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ 20 ಯಾತ್ರಿಕರು ಜಲಪೇಶ್ ಶಿವಮಂದಿರ ಕ್ಷೇತ್ರಕ್ಕೆ ಪಿಕಪ್ ವಾಹನದಲ್ಲಿ ತೆರಳುತ್ತಿದ್ದರು. ವಾಹನ ಚಂಗ್ರಬಂಧ ಸೇತುವೆಯನ್ನು ದಾಟುತ್ತಿದ್ದಾಗ ಪಿಕಪ್ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.
ವಾಹನದಲ್ಲಿ 10 ಯುವಕರು ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ್ದಾರೆ. ಉಳಿದವರು ಗಾಯಗೊಂಡು ಅಸ್ವಸ್ಥರಾಗಿದ್ದರು. ತಕ್ಷಣವೇ ಚಾಲಕ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.