ದಿಯೋಘರ್(ಜಾರ್ಖಂಡ್): ಸಾಮಾನ್ಯವಾಗಿ ಭಕ್ತರು ದೇವಾಲಯಗಳಿಗೆ ಬರಿಗಾಲಲ್ಲಿ ಪಾದಯಾತ್ರೆ ಅಥವಾ ತೀರ್ಥಯಾತ್ರೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಿಯೋಘರ್ನ ಶಿವನ ಧಾಮಗಳಲ್ಲಿ ಒಂದಾದ ಬೈದ್ಯನಾಥ ಧಾಮಕ್ಕೆ ತಮ್ಮ ಎರಡು ಕೈಗಳಲ್ಲೇ ಸಾಗಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಥನಗರ ರಾಸ್ಧಾ ನಿವಾಸಿ ಅಶೋಕ್ ಗಿರಿ ಅಲಿಯಾಸ್ ಮಣ್ಣು ಸೋನಿ ಬೈದ್ಯನಾಥ ಧಾಮಕ್ಕೆ ತಲುಪಿರುವ ಭಕ್ತ. ಜುಲೈ 11ರ ರಕ್ಷಾ ಬಂಧನದ ದಿನ ಅಶೋಕ್ ಅವರು ಬಿಹಾರದ ಸುಲ್ತಾನ್ಗಂಜ್ನಿಂದ ಬೈದ್ಯನಾಥ ಧಾಮಕ್ಕೆ ತೀರ್ಥಯಾತ್ರೆ ಪ್ರಾರಂಭಿಸಿದ್ದು, 126 ದಿನಗಳಲ್ಲಿ ಸುಮಾರು 100 ಕಿ. ಮೀ ದೂರವನ್ನು ತಮ್ಮ ಕೈಗಳಲ್ಲೇ ಸಾಗಿ ಬಂದು ದಿಯೋಘರ್ನ ಬೈದ್ಯನಾಥ ಧಾಮವನ್ನು ತಲುಪಿದ್ದಾರೆ.