ಕರ್ನಾಟಕ

karnataka

ETV Bharat / bharat

ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ! - ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ

ಜಾರ್ಖಂಡ್​ನ ಭಕ್ತರೊಬ್ಬರು 101 ಕೆಜಿ ಬೆಳ್ಳಿಯ ಬಾಗಿಲನ್ನು ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

devotee offered 101 kg silver door
devotee offered 101 kg silver door

By

Published : Apr 28, 2022, 7:58 PM IST

ಮಿರ್ಜಾಪುರ್(ಉತ್ತರ ಪ್ರದೇಶ):ಜಾರ್ಖಂಡ್​ನ ಭಕ್ತರೊಬ್ಬರು ಉತ್ತರ ಪ್ರದೇಶದ ವಿಂಧ್ಯವಾಸಿನಿ ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿಯ ಬಾಗಿಲು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ದೇವಸ್ಥಾನಕ್ಕೆ ಹಿತ್ತಾಳೆ ಬಾಗಿಲು ಇರುವುದನ್ನು ನೋಡಿ ಬೇಸರಗೊಂಡ ಅವರು,ಇದೀಗ ಬೆಳ್ಳಿ ಬಾಗಿಲು ನೀಡಿದ್ದಾರೆ.


ಜಾರ್ಖಂಡ್​ನ ಭಕ್ತ ಸಂಜಯ್​ ಚೌಧರಿ ಕಳೆದ 25 ವರ್ಷಗಳಿಂದಲೂ ಉತ್ತರ ಪ್ರದೇಶದಲ್ಲಿರುವ ವಿಂಧ್ಯವಾಸಿನಿ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದು, ದೇವಿಯ ಮುಖ್ಯದ್ವಾರದ ಹಿತ್ತಾಳೆ ಬಾಗಿಲು ನೋಡಿ ಬೇಸರಗೊಂಡಿದ್ದನು. ಜೊತೆಗೆ ತಾನೂ ಬೆಳ್ಳಿಯ ಬಾಗಿಲು ಮಾಡಿಸಿಕೊಡುವುದಾಗಿ ಮನಸ್ಸಿನಲ್ಲಿ ಅಂದುಕೊಂಡಿದ್ದರಂತೆ. ಅದರಂತೆ ಇದೀಗ 101 ಕೆಜಿ ಬೆಳ್ಳಿಯ ಬಾಗಿಲು ಸಮರ್ಪಿಸಿದ್ದಾರೆ. ಈ ಹಿಂದೆ 2021ರ ಆಗಸ್ಟ್​ ತಿಂಗಳಲ್ಲಿ ಭಕ್ತರೊಬ್ಬರು ಈ ದೇವಸ್ಥಾನಕ್ಕೆ ಚಿನ್ನದ ಕಿರೀಟ ಹಾಗೂ ಪಾದ ನೀಡಿದ್ದರು.


ಇದನ್ನೂ ಓದಿ:ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ ಸಹೋದರ; ತಾಯಿ ಮೇಲೂ ದುಷ್ಕೃತ್ಯ ಯತ್ನ

ಅಮ್ಮನ ಆಶೀರ್ವಾದದಿಂದ ಇದೆಲ್ಲವೂ ನಡೆದಿದೆ ಎಂದು ಭಕ್ತ ಸಂಜಯ್​ ಚೌಧರಿ ಹೇಳಿಕೊಂಡಿದ್ದು, ಕುಶಲಕರ್ಮಿಗಳಾದ ವಿಕ್ರಮ್​, ಪ್ರಮೋದ್​, ಗೋಪಾಲ್​ ಅವರು ಬಾಗಿಲು ನಿರ್ಮಿಸಿದ್ದಾರೆಂದು ತಿಳಿಸಿದ್ದಾರೆ. ಸಂಜಯ್​ ಚೌಧರಿ ಕಳೆದ 25 ವರ್ಷಗಳಿಂದಲೂ ಈ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದಾರೆ.

ABOUT THE AUTHOR

...view details