ಕರ್ನಾಟಕ

karnataka

ETV Bharat / bharat

ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಭಕ್ತ

ಶಿರಡಿ ಸಾಯಿಬಾಬಾಗೆ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಕ್ತರೊಬ್ಬರು 368 ಗ್ರಾಂ ತೂಕದ ವಜ್ರ ಖಚಿತ ಚಿನ್ನದ ಕಿರೀಟ ಸಮರ್ಪಿಸಿದ್ದಾರೆ.

devotee-from-england-diamond-crown-donation-to-shirdi-sai-baba
ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಭಕ್ತ

By

Published : Dec 27, 2022, 10:01 PM IST

ಶಿರಡಿ (ಮಹಾರಾಷ್ಟ್ರ) :ಮಹಾರಾಷ್ಟ್ರದ ಪ್ರಸಿದ್ಧ ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟವನ್ನು ಇಂಗ್ಲೆಂಡ್​ ಮೂಲದ ಭಕ್ತರೊಬ್ಬರು ಒಪ್ಪಿಸಿದ್ದಾರೆ. ಈ ಕಿರೀಟವು 368 ಗ್ರಾಂ ತೂಕವಿದೆ ಎಂದು ತಿಳಿದು ಬಂದಿದೆ.

ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಭಕ್ತ

ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಸಾಯಿ ಭಕ್ತರಾದ ಕನಾರಿ ​​ಸುಬಾರಿ ಪಟೇಲ್ ಎಂಬುವವರು ಬೆಲೆ ಬಾಳುವ ಕಿರೀಟವನ್ನು ಸಮರ್ಪಿಸಿದ್ದಾರೆ. ಅಂದವಾದ ಕೆತ್ತನೆಗಳನ್ನು ಹೊಂದಿರುವ ಕಿರೀಟವು ನೋಡಲು ಆಕರ್ಷಕವಾಗಿದ್ದು, ಸಾಯಿಬಾಬಾ ಟ್ರಸ್ಟ್‌ಗೆ ಪಟೇಲ್ ಹಸ್ತಾಂತರಿಸಿದ್ದಾರೆ.

ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಭಕ್ತ

ಪ್ರತಿ ಆರತಿಯ ಸಮಯದಲ್ಲಿ ಸಾಯಿಬಾಬಾಗೆ ಕಿರೀಟವನ್ನು ಅರ್ಪಿಸುವುದು ವಾಡಿಕೆ. ಆರಂಭದ ದಿನಗಳಲ್ಲಿ ಬಾಬಾಗೆ ಬೆಳ್ಳಿಯ ಕಿರೀಟಗಳನ್ನು ಅರ್ಪಿಸಲಾಗುತ್ತಿತ್ತು. ನಂತರದಲ್ಲಿ ಚಿನ್ನದ ಕಿರೀಟಗಳನ್ನು ಭಕ್ತರು ದಾನ ಮಾಡಲು ಆರಂಭಿಸಿದ್ದರು. ಈ ಬಾರಿ ಬಾಬಾ ಅವರಿಗೆ ವಜ್ರಗಳಿಂದ ಕೂಡಿದ ಕಿರೀಟ ಅರ್ಪಿಸಲಾಗಿದೆ. ಇದರ ಬೆಲೆ 28 ಲಕ್ಷ ರೂಪಾಯಿ ಎಂದು ಟ್ರಸ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ: 39 ದಿನಗಳಲ್ಲಿ 222 ಕೋಟಿ ರೂ ಕಾಣಿಕೆ ಸಂಗ್ರಹ

ABOUT THE AUTHOR

...view details