ಕೌಶಂಬಿ(ಉತ್ತರಪ್ರದೇಶ):ಭಕ್ತಿಯ ಪರಾಕಾಷ್ಠೆಯೋ, ಹುಚ್ಚುತನವೋ ತಿಳಿಯದು. ಭಕ್ತನೊಬ್ಬ ದೇವಿಗೆ ತನ್ನ ನಾಲಿಗೆಯನ್ನೇ ಕತ್ತರಿಸಿ ಅರ್ಪಿಸಿದ ಭೀಕರ ಘಟನೆ ಉತ್ತರಪ್ರದೇಶದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಬಳಿಕ ಅಧಿಕ ರಕ್ತಸ್ರಾವವಾಗಿ ಆತನ ಸ್ಥಿತಿ ಚಿಂತಾಜನಕವಾಗಿದೆ.
ಬ್ಲೇಡ್ನಿಂದ ನಾಲಿಗೆ ಕಟ್: ಇಲ್ಲಿನ ಶೀತಲ ಮಾತೆಯ ದೇಗುಲಕ್ಕೆ ಈ ಭಕ್ತ ಭೇಟಿ ನೀಡಿದ್ದ. ಪತ್ನಿಯೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡಿದ ಆತ ಬಳಿಕ ಮಾತೆಯ ದೇಗುಲಕ್ಕೆ ಪೂಜೆಗೆ ಬಂದಿದ್ದಾರೆ. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ನಮಸ್ಕರಿಸು ಎಂದು ಪತ್ನಿಗೆ ತಿಳಿಸಿದ್ದಾರೆ. ಪತ್ನಿ ಶಿರಬಾಗಿ ನಮಿಸುವಾಗ ಆತ ಇದ್ದಕ್ಕಿದ್ದಂತೆ ಬ್ಲೇಡ್ನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ.