ಮುಂಬೈ:ರಾಜ್ಯದ ಜಲಗಾಂವ್ ಪ್ರದೇಶದಲ್ಲಿ ವಿಶೇಷಚೇತರಿಗಾಗಿ ದೀಪಸ್ತಂ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಯುವತಿಯೊಬ್ಬಳು ತನ್ನ ಕಾಲ್ಬೆರಳಿನಿಂದ ತಿಲಕವಿಟ್ಟರು. ಈ ದೃಶ್ಯವು ಅಲ್ಲಿ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು. ಫಡ್ನವೀಸ್ ಕೂಡಾ ಭಾವುಕರಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರಸಿದ್ಧ ಪುರಿ ಜಗನ್ನಾಥದಲ್ಲಿಂದು ಬಹುದಾ ಯಾತ್ರೆಯ ಸಂಭ್ರಮ.. ಏನಿದು ಬಹುದಾ ಯಾತ್ರೆ?
ಫಡ್ನವೀಸ್ ಟ್ವೀಟ್:''ಇಲ್ಲಿಯವರೆಗೆ ನಾನು ಅನೇಕ ತಾಯಂದಿರು ಮತ್ತು ಸಹೋದರಿಯರಿಂದ ಆಶೀರ್ವಾದ ಪಡೆದಿದ್ದೇನೆ. ಇಲ್ಲೊಬ್ಬ ಸಹೋದರಿಯ ಕಾಲ್ಬೆರಳು ತಿಲಕ ನೀಡಲು ನನ್ನ ಹಣೆ ತಲುಪಿತು. ಜೀವನದಲ್ಲಿ ಇಂತಹ ಕ್ಷಣಗಳು ತುಂಬಾ ಭಾವನಾತ್ಮಕವಾಗಿರುತ್ತವೆ. ಕಣ್ಣುಗಳು ಹೊಳೆಯುವಂತೆ ಮಾಡುತ್ತವೆ. ಈ ಸಂರ್ಭದಲ್ಲಿ ಆಕೆಯ ಮುಖದಲ್ಲಿ ನಗು ಮತ್ತು ಕಣ್ಣುಗಳಲ್ಲಿ ಏನೋ ಒಂದು ರೀತಿಯ ಮಿಂಚು ಕಾಣಿಸಿತು. ಎಂತಹ ಪರಿಸ್ಥಿತಿ ಎದುರಾದರೂ, ನನಗೆ ಯಾರ ಅನುಕಂಪ, ಕರುಣೆಯೂ ಬೇಕಾಗಿಲ್ಲ. ನಾನೇ ಬಲಶಾಲಿ ಎಂದು ಹೇಳುವಂತಿತ್ತು'' ಎಂದು ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.
ಇದರ ಜತೆಗೆ, ಫಡ್ನವೀಸ್, ಸಹೋದರಿ, ನಿಮ್ಮ ಪ್ರತಿಯೊಂದು ಯುದ್ಧದಲ್ಲಿ ನಾನು ನಿಮಗಾಗಿ ಇದ್ದೇನೆ ಎಂದು ಭರವಸೆ ನೀಡಿದ್ದಾರೆ.
ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಡಿಸಿಎಂ ಫಡ್ನವೀಸ್:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರಕ್ಕೆ ಇತ್ತೀಚೆಗೆ ಭೇಟಿ ನೀಡಿ ರಾಮಲಲ್ಲಾನಿಗೆ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದರು. ಶಾಸಕರು ಹಾಗೂ ಬೆಂಬಲಿಗರ ಸಮೇತವಾಗಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದರು. ಮಹಾರಾಷ್ಟ್ರ ಸಿಎಂ ಆದ ಬಳಿಕ ಮೊದಲ ಬಾರಿಗೆ ಅವರು ಕ್ಷೇತ್ರಪಾಲಕನ ಸನ್ನಿಧಾನಕ್ಕೆ ಬಂದಿದ್ದರು.
ಶ್ರೀರಾಮನ ಆಶೀರ್ವಾದ ನಮ್ಮೊಂದಿಗೆ ಇದೆ. ಅದಕ್ಕಾಗಿ ನಾವು ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ಪಡೆದುಕೊಂಡಿದ್ದೇವೆ ಎಂದು ಅಯೋಧ್ಯೆಗೆ ತೆರಳುವ ಮುನ್ನ ಏಕನಾಥ್ ಶಿಂಧೆ ಹೇಳಿದ್ದರು. ರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಬಂದಿದ್ದು ತುಂಬಾ ಸಂತೋಷ ಉಂಟುಮಾಡಿತ್ತು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದರು.
ಲಖನೌ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು, ಬೆಂಬಲಿಗರ ಘೋಷಣೆಯ ಮಧ್ಯೆ ಏಕನಾಥ್ ಶಿಂಧೆ ಅವರನ್ನು ಸ್ವಾಗತಿಸಿದ್ದರು. ಸರಯೂ ನದಿಯ ದಡದಲ್ಲಿ 'ಗಂಗಾರತಿ' ಬೆಳಗಲಾಗಿತ್ತು. ರಾಮ ಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ:ದೆಹಲಿಯ ಔರಂಗಜೇಬ್ ರಸ್ತೆಯ ಹೆಸರು ಬದಲು; ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ
ಕ್ಯೂಎಸ್ ವರ್ಲ್ಡ್ ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದ ಐಐಟಿ ಬಾಂಬೆ