ಕರ್ನಾಟಕ

karnataka

ETV Bharat / bharat

'ಇದು ಏಕನಾಥ್ -​​ದೇವೇಂದ್ರ​ ಅವರ ED ಸರ್ಕಾರ'.. ಲೇವಡಿ ಮಾಡುವವರಿಗೆ ತಿರುಗೇಟು ನೀಡಿದ ಫಡ್ನವೀಸ್​

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಏಕನಾಥ್ ಶಿಂದೆ ಸರ್ಕಾರ ಯಶಸ್ವಿಯಾಗಿದೆ. ಈ ವೇಳೆ ಮಾತನಾಡಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ನಮ್ಮದು ಇಡಿ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

Devendra Fadnavis statement on ED Government
Devendra Fadnavis statement on ED Government

By

Published : Jul 4, 2022, 3:04 PM IST

ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ಏಕನಾಥ್ ಶಿಂದೆ ನೇತೃತ್ವದ ಬಿಜೆಪಿ+ ಶಿವಸೇನೆ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮಹಾರಾಷ್ಟ್ರ ಬಿಕ್ಕಟ್ಟಿಗೆ ತೆರೆ ಬಿದ್ದಿದೆ. 288 ಸದಸ್ಯ ಬಲದಲ್ಲಿ ಮೈತ್ರಿ ಸರ್ಕಾರದ ಪರವಾಗಿ 164 ಶಾಸಕರು ಮತ ಚಲಾವಣೆ ಮಾಡಿದರು.

ವಿಶ್ವಾಸಮತ ಗೆದ್ದ ಬಳಿಕ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿದರು. 2019ರಲ್ಲಿ ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಬಹುಮತದಿಂದ ದೂರವಿಡಲಾಗಿತ್ತು. ಇದೀಗ ಏಕನಾಥ್ ಶಿಂಧೆ ಅವರೊಂದಿಗೆ ನಾವು ಮತ್ತೊಮ್ಮೆ ಶಿವಸೇನೆ ಜೊತೆ ಸರ್ಕಾರ ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ. ನನ್ನ ಪಕ್ಷದ ಆಜ್ಞೆಯಂತೆ ನಾನು ಉಪ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಏಕನಾಥ್​ ಶಿಂದೆ.. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಬಾಧಿತ

ಲೇವಡಿ ಮಾಡುವವರಿಗೆ ಫಡ್ನವೀಸ್ ತಿರುಗೇಟು:ಇದು ಇಡಿ ಸರ್ಕಾರ ಎಂದು ಜನರು ಲೇವಡಿ ಮಾಡುತ್ತಿದ್ದಾರೆ. ಹೌದು, ಇದು ಏಕನಾಥ್ ದೇವೇಂದ್ರ ಅವರ ಇಡಿ ಸರ್ಕಾರ ಎಂದು ತಿರುಗೇಟು ನೀಡಿದರು. ಈ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಎಂದಿಗೂ ಜಗಳ ನಡೆಯುವುದಿಲ್ಲ. ಸಹಕಾರದೊಂದಿಗೆ ಮುಂದುವರೆಯುತ್ತೇವೆ. ನಾನು ಮತ್ತೆ ಬರುತ್ತೇನೆಂದು ಹಿಂದೊಮ್ಮೆ ಹೇಳಿದ್ದೆ. ಆ ವೇಳೆ ಅನೇಕರು ನನ್ನನ್ನು ಅಪಹಾಸ್ಯ ಮಾಡಿದ್ದರು. ಇದೀಗ ಹಿಂತಿರುಗಿ ಬಂದಿದ್ದೇನೆ. ಆದರೆ, ಅಪಹಾಸ್ಯ ಮಾಡಿದವರ ಮೇಲೆ ನಾನು ಸೇಡು ತಿರಿಸಿಕೊಳ್ಳುವುದಿಲ್ಲ. ಅವರನ್ನ ಕ್ಷಮಿಸುತ್ತೇನೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಆದರೆ, ಮೂರು ದಿನಗಳ ಹಿಂದೆ ಬಂಡಾಯ ಶಿವಸೇನೆ ಹಾಗೂ ಬಿಜೆಪಿ ಜೊತೆಯಾಗಿ ಸರ್ಕಾರ ರಚನೆ ಮಾಡಿದ್ದವು. ಈ ವೇಳೆ, ಶಿವಸೇನೆಯ ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಿ, ಅದರಲ್ಲಿ ಗೆಲುವು ದಾಖಲು ಮಾಡಿದ್ದಾರೆ.

ABOUT THE AUTHOR

...view details