ಮುಂಬೈ (ಮಹಾರಾಷ್ಟ್ರ):ಆದಷ್ಟು ಬೇಗ ಬಹುಮತ ಸಾಬೀತು ಪಡಿಸುವಂತೆ ಮಹಾವಿಕಾಸ್ ಅಘಾಡಿ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿರಿಗೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದರು. ಹೀಗಾಗಿ ರಾಜ್ಯಪಾಲರು ತಮ್ಮ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದಾರೆ.
ಬಹುಮತ ಸಾಬೀತಿಗೆ ರಾಜ್ಯಪಾಲರಿಂದ ಸಿಎಂಗೆ ಪತ್ರ ಚಂದ್ರಕಾಂತ್ ಪಾಟೀಲ್, ಪ್ರವೀಣ್ ದಾರೆಕರ್ ಮತ್ತು ಆಶಿಶ್ ಶೆಲಾರ್ ಅವರು ದೇವೇಂದ್ರ ಫಡ್ನವಿಸ್ ಜೊತೆ ನಿನ್ನೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದರು. ಈ ವೇಳೆ, ಆದಷ್ಟು ಬೇಗ ಮಹಾವಿಕಾಸ್ ಅಘಾಡಿ ಬಹುಮತ ಸಾಬೀತು ಪಡಿಸುವಂತೆ ಫಡ್ನವಿಸ್ ರಾಜ್ಯಪಾಲರ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಠಾಕ್ರೆ ಸರ್ಕಾರ ತಕ್ಷಣವೇ ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸಿ ದೇವೇಂದ್ರ ಫಡ್ನವೀಸ್ ರಾಜ್ಯಪಾಲರಿಗೆ ಪತ್ರ ಹಸ್ತಾಂತರಿಸಿದರು. ನಾವು ಇಂದು ರಾಜ್ಯಪಾಲರಿಗೆ ಇಮೇಲ್ ಮೂಲಕ ಮತ್ತು ವೈಯಕ್ತಿಕವಾಗಿ ಪತ್ರವನ್ನು ಕಳುಹಿಸಿದ್ದೇವೆ ಎಂದೂ ಫಡ್ನವಿಸ್ ಇದೇ ವೇಳೆ ಸ್ಪಷ್ಟಪಡಿಸಿದರು.
ನಾಳೆ ಮಹಾವಿಕಾಸ್ ಅಘಾಡಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಓದಿ:ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಫಡ್ನವೀಸ್; ಸಚಿವ ಸಂಪುಟ ಸಭೆ ಕರೆದ ಉದ್ಧವ್
ರಾಜ್ಯದ ಪ್ರಸ್ತುತ ಪರಿಸ್ಥಿತಿ 39 ಶಿವಸೇನೆ ಶಾಸಕರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಇರಲು ಬಯಸುತ್ತಿಲ್ಲ. ಆ ಕಾರಣಕ್ಕಾಗಿ ಅವರು ಮಹಾವಿಕಾಸ ಒಕ್ಕೂಟ ಅಥವಾ ಸರ್ಕಾರವನ್ನು ತೊರೆಯುತ್ತಿದ್ದಾರೆ. ಹಾಗಾಗಿ ಠಾಕ್ರೆ ಸರಕಾರಕ್ಕೆ ಬಹುಮತವಿಲ್ಲ. ಇದಕ್ಕಾಗಿ ಬಹುಮತ ಪರೀಕ್ಷೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.
ಫಡ್ನವಿಸ್ ಭೇಟಿ ನಂತರ ಇಂದು ರಾಜ್ಯಪಾಲರು ತಮ್ಮ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳಿಗೆ ಪತ್ರವನ್ನು ರವಾನಿಸಿದ್ದು, ನಾಳೆ ಮಹಾ ಅಘಾಡಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ.
ಕಾಮಾಖ್ಯ ದೇವಿ ದರ್ಶನ ಪಡೆದ ಶಿಂದೆ ಕಾಮಾಖ್ಯ ದೇವಿ ದರ್ಶನ ಪಡೆದ ಶಿಂದೆ:ಅತ್ತರಾಜ್ಯಪಾಲರು ಸಿಎಂ ಉದ್ದವ್ ಠಾಕ್ರೆಗೆ ಬಹುಮತ ಸಾಬೀತು ಮಾಡುವಂತೆ ಪತ್ರ ಬರೆದಿದ್ದರೆ, ಇತ್ತಏಕನಾಥ್ ಶಿಂಧೆ ಸೇರಿದಂತೆ ನಾಲ್ವರು ಬಂಡಾಯ ಶಾಸಕರು ಬುಧವಾರ ಬೆಳಗ್ಗೆ 7.45ಕ್ಕೆ ಹೋಟೆಲ್ ರಾಡಿಸನ್ ಬ್ಲೂನಿಂದ ಕಾಮಾಖ್ಯಕ್ಕೆ ತೆರಳಿ ದರ್ಶನ ಪಡೆದರು.
ದೇವಸ್ಥಾನಕ್ಕೆ ತೆರಳುವ ಮುನ್ನ ಮಾತನಾಡಿದ ಏಕನಾಥ ಶಿಂದೆ, ನಾವೀಗ ಶಿವಸೈನಿಕರು, ನಾವು ಶಿವಸೇನೆಯಲ್ಲಿಯೇ ಇದ್ದೇವೆ. ಮಹಾರಾಷ್ಟ್ರದ ರಾಜ್ಯಪಾಲರು ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕೆ ಕರೆದಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವಿದೆ. ನಾಳೆಯೊಳಗೆ ನಾವು ಮುಂಬೈಗೆ ಹೋಗುತ್ತೇವೆ ಎಂದು ಏಕನಾಥ್ ಶಿಂದೆ ಸ್ಪಷ್ಟಪಡಿಸಿದ್ದಾರೆ.
ಅವರು ಮುಂಬೈಗೆ ಹೋಗುತ್ತಾರೋ ಅಥವಾ ದೆಹಲಿಗೆ ಹೋಗುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿಯೋಗ ಎರಡು ಭಾಗವಾಗಿ ಮುಂಬೈಗೆ ಹೊರಡಲಿದೆ ಎಂದು ಹೇಳಲಾಗುತ್ತಿದೆ. ಜೂನ್ 20 ರಿಂದ ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದರು. ಮೊದಲು ಸೂರತ್ಗೆ ತೆರಳಿದ್ದ ಶಿಂದೆ ನೇತೃತ್ವದ ಶಾಸಕರ ತಂಡ ಆ ಬಳಿಕ ಗುವಾಹಟಿಗೆ ತೆರಳಿ ಹೋಟೆಲ್ ರಾಡಿಸನ್ ಬ್ಲೂನಲ್ಲಿ ಉಳಿದುಕೊಂಡಿತ್ತು.